ಚೀನಾ: ಚೀನಾವನ್ನು ಕಾಡ್ತಾ ಇದೆ ಹೊಸ ಸಮಸ್ಯೆ. ಜಗತ್ತು ಬದಲಾಗ್ತಾ ಇದೆ. ಲಿವ್ ಇನ್ ಹೆಚ್ಚೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮನೆ, ಮಕ್ಕಳು, ಸಂಸಾರದ ಜಂಜಾಟದಲ್ಲಿ ಬೀಳುವ ಬದಲು ಸ್ವತಂತ್ರ ಜೀವನವನ್ನು ಜನರು ಇಷ್ಟಪಡ್ತಿದ್ದಾರೆ. ಇದು ಚೀನಾದಲ್ಲಿ ಮತ್ತೊಂದು ಸಮಸ್ಯೆಗೆ ಕಾರಣವಾಗ್ತಾ ಇದೆ.
ಚೀನಾದಲ್ಲಿ ಒಂದು ಕಡೆ ಜನಸಂಖ್ಯೆ ಏರ್ತಾ ಇದೆ. ಇನ್ನೊಂದು ಕಡೆ ಅವಿವಾಹಿತರ ಸಂಖ್ಯೆ ಹೆಚ್ಚಾಗ್ತಾ ಇದೆ. 2015 ರ ವರದಿ ಪ್ರಕಾರ 20 ಕೋಟಿ ಅವಿವಾಹಿತರು ಚೀನಾದಲ್ಲಿದ್ದಾರೆ. ಇದ್ರಲ್ಲಿ ಮಹಿಳೆಯರು ಕೂಡ ಹಿಂದೆ ಬಿದ್ದಿಲ್ಲ. ಶೇಕಡಾ 36ರಷ್ಟು ಮಹಿಳೆಯರು ವಿವಾಹವಾಗಿಲ್ಲ.
ಸ್ವತಂತ್ರ ಜೀವನ ಬಯಸುತ್ತಿರುವ ಮಹಿಳೆಯರು ಯಾರ ಹಂಗಿಲ್ಲದೆ ಬದುಕುತ್ತಿದ್ದಾರೆ. ಮದುವೆಗಿಂತ ಸ್ನೇಹಿತರ ಜೊತೆ ಮೋಜು, ಮಸ್ತಿಯಿಂದಿರುವುದು ಅವರಿಗೆ ಇಷ್ಟವಾಗ್ತಾ ಇದೆ. ಇದೇ ಕಾರಣಕ್ಕೆ ಚೀನಾದಲ್ಲಿ ಅವಿವಾಹಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. 20 ಕೋಟಿ ಅವಿವಾಹಿತರಲ್ಲಿ 5 ಕೋಟಿ 80 ಲಕ್ಷ ಮಂದಿ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಅದ್ರಲ್ಲಿ ಶೇಕಡಾ 36ರಷ್ಟು ಮಹಿಳೆಯರು ಸೇರಿದ್ದಾರೆ.

