ಯೋಲ: ಈಶಾನ್ಯ ನೈಜೆರಿಯಾದ ಮದಗಲಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹಿಂದೆ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರವಾದಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

blast09

ತರಕಾರಿ ಮಾರುಕಟ್ಟೆಯ ಎದುರಗಡೆ ಏಕಕಾಲಕ್ಕೆ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ ಎಂದು ಘಟನೆಯಲ್ಲಿ ಗಾಯಗೊಂಡು ಪ್ರಾಣಪಯದಿಂದ ಪಾರಾಗಿರುವ ಪ್ರತ್ಯಕ್ಷದರ್ಶಿ ಅಹ್ಮದು ಗುಲಕ್ ಅವರು ತಿಳಿಸಿದ್ದಾರೆ. ಅಲ್ಲದೆ ತಾನು 10 ಮೃತದೇಹಗಳನ್ನು ಕೌಂಟ್ ಮಾಡಿರುವುದಾಗಿ ಹೇಳಿದ್ದಾರೆ. ಬಾಂಬ್ ಸ್ಫೋಟವನ್ನು ಖಚಿತಪಡಿಸಿರುವ ಪೊಲೀಸ್ ವಕ್ತಾರ ಒತ್ಮಾನ್ ಅಬುಬಕರ್ ಅವರು, ಸಾವಿನ ಸಂಖ್ಯೆ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *