ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಈ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ವಿವಿಧ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸುತ್ತಿವೆ. ಈ ಹಿನ್ನಲೆಯಲ್ಲಿ ಜಯಲಲಿತಾ ಸಾವು ಸಹಜವೇ ಎಂದು ತಿಳಿಯಲು ತನಿಖೆ ನಡೆಸಿ ಜಯಲಲಿತಾ ನಿಗೂಢ ಕೊನೆ ದಿನಗಳು ಮತ್ತು ಸಾವಿನ ಸತ್ಯಾಂಶ ಬಹಿರಂಗವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಚಿತ್ರನಟಿ ಗೌತಮಿ ಪತ್ರ ಬರೆದಿದ್ದಾರೆ.

goutami

ಜಯಲಲಿತಾ ಅವರ ಕೊನೆಯದಿನಗಳು ಮತ್ತು ಸಾವಿನ ಸುತ್ತ ಅನೇಕ ಅನುಮಾನಗಳು, ಸಂಶಯಗಳು ನಾಗರಿಕ ವಲಯದಲ್ಲಿ ಹರಿದಾಡತ್ತಿವೆ. ಆಸ್ಪತ್ರೆಯ ವೈದ್ಯರು ಕೆಲವೊಮ್ಮೆ ಹುಷಾರಾಗಿದ್ದಾರೆ ಎಂದು, ಕೆಲವೊಮ್ಮೆ ಸ್ಥಿತಿ ವಿಷಮವಾಗಿದೆ ಎಂದು ಬಿಂಬಿಸುತ್ತಿದ್ದರು.

ಜಯಲಲಿತಾ ಅಧಿಕಾರ ದಾಹಿಗಳ ಸಂಚಿಗೆ ಬಲಿಯಾದರು. ಅವರು ತೀರಿಕೊಂಡು ಎರಡು ದಿನಗಳ ನಂತರ ಅವರ ಸಾವಿನ ಸುದ್ದಿಯನ್ನು ಬಹಿರಂಗಪಡಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿದ್ದಷ್ಟು ಕಾಲವೂ ಯಾರಿಗೂ ಯಾಕೆ ಅವರನ್ನು ತೋರಿಸಿರಲಿಲ್ಲ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಘೋಷಣೆಯನ್ನು ರಾತ್ರೋ ರಾತ್ರಿ ಮಾಡಿದ್ದೇಕೆ. ಜಯಲಲಿತಾ ಸಾವಿನ ಕುರಿತಾದ ವಿಷಯಗಳು ಅನುಮಾನ ಹುಟ್ಟಿಸುತ್ತಿರುವ ಹಿನ್ನಲೆಯಲ್ಲಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಗೌತಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಜಯಲಲಿತಾ ಅವರು ಅಸ್ವಸ್ಥಗೊಂಡು ಬಹಳ ದಿನಗಳಾದರೂ ಏಕೆ ಗಣ್ಯರಿಗೆ, ಅಭಿಮಾನಿಗಳಿಗೆ ಅವರೊಂದಿಗೆ ಮಾತನಾಡಲು ಬಿಡಲಿಲ್ಲ? ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ ಚಿಕಿತ್ಸೆ ವಿಧಿವಿಧಾನಗಳು ರಹಸ್ಯವಾಗಿತ್ತು ಏಕೆ? ಕೆಲವು ದಿನಗಳ ಹಿಂದೆ, ಕೆಲವೇ ದಿನಗಳಲ್ಲಿ ಅವರು ಮನೆಗೆ ತೆರಳಲಿದ್ದಾರೆ ಎಂದರು ಮತ್ತೆ ಹೃದಯಾಘಾತವಾಗಿದೆ ಎಂದು ತಿಳಿಸಿದರು. ಇದೇ ಸಾವಿನಲ್ಲಾದ ಗೊಂದಲಕ್ಕೆ ಕಾರಣವಾಯಿತು. ಖಚಿತ ತನಿಖೆಯಾದರೆ ಮಾತ್ರ ಎಲ್ಲ ವಿಷಯಗಳು ಜನರಿಗೆ ತಿಳಿಯಲಿವೆ. ಹೀಗಾಗಿ ತನಿಖೆ ನಡೆಸಬೇಕೆಂದು ಪ್ರಧಾನಿಯವರಿಗೆ ನಟಿ ಗೌತಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಜಯಲಲಿತಾ ಅವರು ಅಪೋಲೋ ಅಸ್ಪತ್ರೆಗೆ ದಾಖಲಾಗಿ 72 ದಿನಗಳಿದ್ದರು. ಅಂದರೆ ಸುಮಾರು ಎರಡೂವರೆ ತಿಂಗಳು. ಪಕ್ಷದ ಸದಸ್ಯರೊಂದಿಗೆ, ಆಪ್ತರೊಂದಿಗೆ ಏನು ಮಾತನಾಡಿದ್ದರು? ಚುನಾವಣಾ ಸಂದರ್ಭದಲ್ಲಿ ಅವರು ಅರ್ಜಿಗಳಿಗೆ ಹೆಬ್ಬೆಟ್ಟನ್ನು ಒತ್ತಿದ್ದು ಯಾಕೆ? ಚಿಕಿತ್ಸೆ ಸಮಯದ ಹಲವಾರು ಪ್ರಶ್ನೆಗಳಿಗೆ ಗೌತಮಿಯವರಂತೆ ತಮಿಳುನಾಡಿನ ನಾಗರಿಕರ ಮನದಲ್ಲಿ ಉತ್ತರಕ್ಕಾಗಿ ಕಾತುರತೆಯಿದೆ. ತನಿಖೆ ನಡೆದರೆ ಸತ್ಯ ಹೊರಬೀಳಲಿದೆ.

By suddi9

Leave a Reply

Your email address will not be published. Required fields are marked *