ಬಂಟ್ವಾಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.6ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ದೇವಳದ ಜೀರ್ಣೋದ್ಧಾರ ಕಾಮಗಾರಿಗೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ ರೂ 5ಲಕ್ಷ ಮೊತ್ತದ ದೇಣಿಗೆಯನ್ನು ಬಂಟ್ವಾಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುನಿತಾ ನಾಯಕ್ ಗುರುವಾರ ಹಸ್ತಾಂತರಿಸಿದರು.
ಮೇಲ್ವಿಚಾರಕಿ ನಳಿನಾಕ್ಷಿ, ದೇವಳದ ಟ್ರಸ್ಟಿ ಮುರಳೀಧರ ಶೆಟ್ಟಿ, ಜಗದೀಶ ಅಳ್ವ ಅಗ್ಗೊಂಡೆ, ಪ್ರಧಾನ ಅರ್ಚಕ ಹರೀಶ ಭಟ್, ಪ್ರಮುಖರಾದ ಲಕ್ಷ್ಮೀಧರ ಶೆಟ್ಟಿ, ಉಮೇಶ ಡಿ.ಅರಳ, ಚಂದ್ರಶೇಖರ ಶೆಟ್ಟಿ, ದೇವಪ್ಪ ಕರ್ಕೇರ, ರಂಜನ್ ಕುಮಾರ್, ಶಶಿಧರ ರೈ, ಮಂಜಪ್ಪ ಮತ್ತಿತರರು ಇದ್ದರು.

