ಉಳ್ಳಾಲ: ಗಾಂಜಾ, ಚೀಟಿ ಮುಂತಾದ ಕೆಟ್ಟ ಚಟುವಟಿಕೆಗಳಿಗೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಪ್ರವಾದಿಯವರು ಇದಕ್ಕೆ ಆಸ್ಪದಕೊಡಲಿಲ್ಲ ಎಂದು ನೌಫಲ್ ಸಖಾಫಿ ಕಳಸ ಹೇಳಿದರು.

ಅವರು ನೂರ್ ಎ ಮದೀನ ನಿಡ್ಮಾಡ್ ಬ್ರದರ್ಸ್ ವತಿಯಿಂದ ಜರಗಿದ ಹುಬ್ಬುರ್ರಸೂಲ್ ಪ್ರಭಾಷಣ ಮತ್ತು ಬಸ್ ತಂಗುದಾಣ ಉದ್ಘಾಟನಾ ಸಮಾರಂಭದ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. ಪ್ರಸಕ್ತ ಈ ಬಗ್ಗೆ ಅರ್ಥಮಾಡಿಕೊಳ್ಳದ ಮುಸ್ಲಿಂ ಯುವಕರು ಗಾಂಜಾ, ಚೀಟಿಯಲ್ಲಿ ನಿರತರಾಗಿ ದಾರಿ ತಪ್ಪುತ್ತಿದ್ದಾರೆ.ಇದರಿಂದ ಮುಕ್ತರಾಗಿ ಬದುಕಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಾತನಾಡಿ, ಪ್ರವಾದಿಯವರ ಮೇಲೆ ಪ್ರೀತಿ , ವಿಶ್ವಾಸ ನಂಬಿಕೆಯಿಂದ ಕಾರ್ಯಕ್ರಮ ಮಾಡಬೇಕೇ ಹೊರತು ಅವರು ವಿರೋಧಿಸಿದ ಹಾದಿಯಲ್ಲಿ ಕಾರ್ಯಕ್ರಮ ಮಾಡಬಾರದು ಎಂದು ನುಡಿದರು.

ಸಯ್ಯದ್ ಅಶ್ರಫ್ ತಂಙಳ್ ಆದೂರು ಮಾತನಾಡಿ, ಪ್ರವಾದಿಯವರು ಧರ್ಮ ಮತ್ತು ಸಮಾಜಕ್ಕಾಗಿ ಬಹಳಷ್ಟು ಸೇವೆ ಮಾಡಿದವರು. ಸಮಾಜವನ್ನು ಅಭಿವೃದ್ಧಿಯ ಕೆಲಸ ಮಾಡಿದ್ದಾರೆಯೇ ಹೊರತು ಹದಗೆಡಿಸುವ ಕೆಲಸ ಮಾಡಿಲ್ಲ. ನಾವು ಕೂಡಾ ಅಭಿವೃದ್ದಿಯ ಗುರಿ ಇಟ್ಟು ಸೇವೆ ಮಾಡಬೇಕೆಂದು ಕರೆ ನೀಡಿದರು.
ಸಚಿವ ಯು.ಟಿ. ಖಾದರ್ ಬಸ್ ತಂಗುದಾಣವನ್ನು ಉದ್ಘಾಟಿಸಿದರು. ಅಬ್ಬಾಸ್ ಸಖಾಫಿ ಮರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೌಫಲ್ ಸಖಾಫಿಕಳಸ ಮುಖ್ಯ ಭಾಷಣ ಮಾಡಿದರು. ಮುಹಿದ್ದೀನ್ ಸಅದಿ ತೋಟಾಲ್, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಡಾ. ಮುನೀರ್ ಬಾವಾ, ಕತ್ತರ್ ಬಾವಾ ಹಾಜಿ, ಇಸ್ಮಾಯಿಲ್ ಮಾಸ್ಟರ್ ಬಡುವ ಕುಂಞÂ ನಿಡ್ಮಾಡ್, ಮಹ್ಮೂದ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಮನ್ಸೂರ್ ಹಿಮಮಿ ಅತಿಥಿಗಳನ್ನು ಸ್ವಾಗತಿಸಿದರು. ಬಶೀರ್ ಎನ್.ಬಿ. ವಂದಿಸಿದರು.
