ಬಂಟ್ವಾಳ: ಈದ್ ಮಿಲಾದ್ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಂಟ್ವಾಳ ನಗರ ಠಾಣೆಯಲ್ಲಿ ನಗರ ಠಾಣಾ ಪಿ.ಎಸ್.ಐ. ನಂದ ಕುಮಾರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

police

ಪಿ.ಎಸ್.ಐ. ನಂದ ಕುಮಾರ್ ಮಾತನಾಡಿ ಸೌಹಾರ್ದಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಹೇಳಿದರು. ಮಸೀದಿಯ ವತಿಯಿಂದ ಕಾಲ್ನಡಿಗೆ ಜಾಥವನ್ನು ಮಾತ್ರ ಮಾಡಬೇಕು , ಯಾವುದೇ ರೀತಿಯ ವಾಹನ ಜಾಥಗಳಿಗೆ ಅವಕಾಶವಿಲ್ಲ , ನಿಯಮ ಮೀರಿ ವಾಹನ ಜಾಥ ಮಾಡಿದರೆ ಅವರ ವಿರುದ್ದ ಪೋಲೀಸ್ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಅಲ್ಲಲ್ಲಿ ಕಾನೂನು ಸುವ್ಯಸ್ಥೆಯಾಗಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಹಬ್ಬಕ್ಕೆ ಶುಭಕೋರುವ ಬ್ಯಾನರ್ , ಬಂಟ್ಟಿಗ್ಸ್ ಮತ್ತು ಧ್ವಜಗಳನ್ನು ಹಾಕಲು ಸ್ಥಳೀಯ ಗ್ರಾ.ಪಂ. ಅಥವಾ ಪುರಸಭೆಯ ಒಪ್ಪಿಗೆ ಯನ್ನು ಪಡೆಯಬೇಕಿದೆ ಎಂದು ಹೇಳಿದರು.

ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಲು ನಮಗೆ ಸೂಕ್ತ ಪೋಲೀಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಗ್ರಾಮಾಂತರ ಎ.ಎಸ್.ಐ ಭಾಸ್ಕರ, ತರಬೇತಿ ಪಿ.ಎಸ್.ಐ ಈರಯ್ಯ,ನಗರ ಠಾಣಾ ಎ.ಎಸ್.ಐ ಸೇಸಮ್ಮ, ಕರೀಂ,ಕೃಷ್ಣ ಕುಲಾಲ್,ಜಗದೀಶ,ಮುರುಗೇಶ್ ಮತ್ತು ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *