ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನ ಅಂದಾಜು 1 ಕೋ.ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಾಣಗೊಳ್ಳಿರುವ ಶಿಲಾಮಯ ಗರ್ಭಗುಡಿ ತೀರ್ಥ ಮಂಟಪದ ಪಾದುಕಾನ್ಯಾಸವು ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.7ರಂದು ಜರಗಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ನ್ಯಾಯಾವಾದಿ ಎಸ್.ಕೆ.ಜಗನ್ನಿವಾಸ ರಾವ್ ಅವರು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್,ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಬಿಲ್ಲವ ಸಮಾಜ ಸಂಘ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ತಾ.ಪಂ.ಸದಸ್ಯ ಕೆ.ಸಂಜೀವ ಪೂಜಾರಿ,ಉದ್ಯಮಿ ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು, ಉದ್ಯಮಿ ಎಂ.ಮಹಾಬಲ ಕೊಟ್ಟಾರಿ ಮಂಗಳೂರು,ಶಂಕರ,ಕೋಚು ಪೂಜಾರಿ ಸಜಿಪ ಮತ್ತಿರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸಂಥೋಷ್ ಕುಮಾರ್ ಶೆಟ್ಟಿ ಮುಂಬೈ, ಪದಾಧಿಕಾರಿಗಳಾದ ಯಶವಂತ ದೇರಾಜೆಗುತ್ತು,ಮಾಜಿ ತಾ.ಪಂ.ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಸುರೇಶ ಬಂಗೇರ, ಜಯಶಂಕರ ಬಾಶ್ರೀತ್ತಾಯ, ಎ.ದೇವಿಪ್ರಸಾದ್ ಪೂಂಜ, ಬಿ.ಕೆ.ಸದಾನಂದ ಶೆಟ್ಟಿ, ಶಾಂತಿರಾಜ ಆರ್ಯಾಪ್ರ, ರಮೇಶ ಎ., ಪಿ.ಜಯಪ್ರಕಾಶ್, ಕೃಷ್ಣಶ್ಯಾಮ್, ಪ್ರೇಮಾ ಜಿ.ಶೆಟ್ಟಿ, ಲಿಂಗಪ್ಪ ದೋಟ, ಎ.ದೇವದಾಸ, ಎಸ್.ಚಂದ್ರಹಾಸ, ವಾಸು ಗಟ್ಟಿ ಪಾಲ್ಗೊಂಡಿದ್ದರು. ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯಶವಂತ ದೇರಾಜೆಗುತ್ತು ಪ್ರಸ್ತಾವಿಸಿದರು. ಎಂ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅನಂತಕೃಷ್ಣ ಐತಾಳ,ಶಂಕರ ಭಟ್, ಎಂ.ಸುಬ್ರಹ್ಮಣ್ಯ ಭಟ್, ಜಗದೀಶ ಸೋಮಯಾಜಿ,ನಾರಾಯಣ ಐತಾಳ, ಶಂಕರ ನಾರಾಯಣ ಭಟ್, ಕೃಷ್ಣ ಹೊಳ್ಳ,ಭರತ್ ಸೋಮಯಾಜಿ, ರಾಘವೇಂದ್ರ ಭಟ್,ಗಣೇಶ್ ರಾವ್, ಸೂರ್ಯ ನಾರಾಯಣ ಹೊಳ್ಳ, ಸುಬ್ರಾಯ ಜೋಶಿ, ಸಚಿನ್ ಹೊಳ್ಳ ಮತ್ತಿತರರು ಉಪನಿಷತ್ ಹೋಮವನ್ನು ನೆರವೇರಿಸಿದರು.
