ಚೆನ್ನೈ: ಜಯಾ ಅಂತಿಮ ದರ್ಶನಕ್ಕೆ ಹೊರಟಿದ್ದ ವಾಯುಸೇನೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡದ್ದರಿಂದ ವಾಪಾಸಾಗಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುನ: ಚೆನ್ನೈ’ಗೆ ಪ್ರಯಾಣ ಬೆಳೆಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಾ ಅಂತಿಮ ದರ್ಶನ ಪಡೆಯಲು ಹೊರಟ್ಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ವಾಪಸ್ಸಾಗಿದ್ದರು. ಆ ಬಳಿಕ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಅವರು ಚೆನ್ನೈಗೆ ಹೊರಡಲಿದ್ದಾರೆ.

