ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೋಬ್ಬ ಹಿಂದೂ ನಾನು ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ಶ್ರೇಷ್ಟ ಧರ್ಮವನ್ನು ಪ್ರೀತಿಸಿದಾಗ ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯುತ್ತೆ ಎಂದು ಶ್ರೀ ಕ್ಷೇತ್ರ ಪೊಳಲಿಯ ಪರಮಪೂಜ್ಯ ಶ್ರೀಶ್ರೀಶ್ರೀ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಅವರು ಹಿಂದೂ ಜಾಗರಣವೇದಿಕೆಯ ವತಿಯಿಂದ ಡಿ.6 ರಂದು ಅಯೋಧ್ಯೆ ಶ್ರೀ ರಾಮನ ಜನ್ಮ ಸ್ಥಾನದ ಬಗ್ಗೆ ನಡೆದ ಮುಕ್ತಿ ಅಂದೋಲನದ ವಿಜಯ ದಿನದ ಅಂಗವಾಗಿ ಬಿಸಿರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅರ್ಶೀವಚನ ನೀಡಿದರು. ಪಾಶ್ಚತ್ಯ ಸಂಸ್ಕೃತಿಯ ಅನುಕರಣೆ ನಮ್ಮ ಮೂಲ ದರ್ಮಕ್ಕೆ ಪೆಟ್ಟು ನೀಡುತ್ತಿದೆ. ಭಜನೆ ಪೂಜೆಯ ಮೂಲಕ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ, ಆ ಮೂಲಕ ಸಂಘಟನೆಯನ್ನು ಬಲಪಡಿಸಿ ದೇಶವನ್ನು ಉಳಿಸಿ ಎಂದು ಅವರು ಹೇಳದರು.

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ದಿಕ್ಸೂಚಿ ಭಾಷಣದ ಮೂಲಕ ಬಹು ಸಂಖ್ಯಾತ ಹಿಂದೂ ಬಹು ದೊಡ್ಡ ಕನಸಾಗಿರುವ ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಡಳಿತ ಪಕ್ಷ ಸಂವಿಧಾದನದಲ್ಲಿ ತಿದ್ದು ಪಡಿ ತಂದು ಕನಸನ್ನು ನನಸು ಮಾಡಬೇಕು ಎಂದು ಹೇಳಿದರು. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೊಲೆಗೈಯುವ ಮತ್ತು ನಿರಂತರ ಹಲ್ಲೆ ನಡೆಸುವ ಮೂಲಕ ಹಿಂದೂ ಸಮಾಜದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಮಾಡುತ್ತಿದ್ದಾರೆ. ಈ ಎಲ್ಲಾ ಪ್ರಕರಣದ ಹಿಂದೆ ಮುಸ್ಲಿಂ ಸಂಘಟನೆಯ ಪದಾಧಿಕಾರಗಳು ಕೈಜೊಡಿಸಿದ್ದರು. ಇಂತಹ ನೂರಾರು ದೇಶದ್ರೋಹ ಕೆಲಸಗಳ ಮೂಲಕ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಇನ್ನು ಹಿಂದೂ ಸಮಾಜ ಇಂತಹ ದುಷ್ಕಂತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಭಯೋತ್ಪಾದನೆ ಮತಾಂತರ ಮತ್ತು ಸಮಾಜ ಒಡೆಯುವ ಕೆಲಸವನ್ನು ಎಂದೂ ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದಲ್ಲದೆ ಇದಕ್ಕೆ ತಕ್ಕ ಪ್ರತೀಕಾರ ನೀಡಲು ಸಿದ್ದವಾಗಿದೆ ಎಂದರು.

ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಹಿ.ಜಾಗರಣಾ ಅಧ್ಯಕ್ಷ ಚಂದ್ರ ಕಲಾಯಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕಲಾಯಿ ಉಪಸಿತರಿದ್ದರು. ಬಾಲಕೃಷ್ಣ ಕಾಮಾಜೆ ಸ್ವಾಗತಿಸಿ, ಕಿರಣ್ ಮೂರ್ಜೆ ಧನ್ಯವಾದ ನೀಡಿದರು , ರಮೇಶ್ ಕುಮಾರ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.

