ಮುಂಬಯಿ: ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್ (ರಿ.) ಪುಣೆ ಇದರ ದ್ವಿದಶ ಸಂಭ್ರಮವು ಇಂದಿಲ್ಲಿ ಆದಿತ್ಯವಾರ ಸಂಜೆ ಪುಣೆ ಕ್ಯಾಂಪ್‍ನ ನೆಹರೂ ಮೆಮೋರಿಯಲ್ ಸಭಾಗೃಹದಲ್ಲಿ ಸಂಭ್ರಮಿಸಿತು. ಮುಖ್ಯ ಅತಿಥಿಯಾಗಿ ಇಶ್ವನಿ ಕೇಂದ್ರ ಪುಣೆ ಇದರ ಸಹಾಯಕ ನಿರ್ದೇಶಕ ರೆ| ಫಾ| ಟೊನಿ ಮಿನೇಜಸ್ ಹಾಗೂ ಗೌರವ ಅತಿಥಿಯಾಗಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ರೆ| ಫಾ| ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

mca-3

ಸಮಾರಂಭದಲ್ಲಿ ಅತಿಥಿಗಳನ್ನೊಳಗೊಂಡು ಅಸೋಸಿಯೇಶನ್‍ನ ಅಧ್ಯಕ್ಷ ರೋನಾಲ್ಡ್ ಸಿಕ್ವೇರಾ ಅವರು ಕೊಂಕಣಿ ನಾಟಕ ರಂಗದ ಮೇರುನಟ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಮೆಡಿಕಿಂಗ್ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ನಾಟಕ ನಿರ್ದೇಶಕ ಜೋಯ್ ಪಾಲಡ್ಕ, ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಫ್ರಾನ್ಸಿಸ್ ಫೆರ್ನಾಂಡಿಸ್ ಅವರು ಅಸೋಸಿಯೇಶನ್‍ನ ಸ್ಮರಣ ಸಂಚಿಕೆ `ಎಕ್ವೋಟ್’ಬಿಡುಗಡೆ ಗೊಳಿಸಿ ಮಾತನಾಡಿ ಕಲೆಗೆ ವಯೋಮಿತಿ ಪರಿಧಿ ಇಲ್ಲ. ಕಲಾಭಿಮಾನಿಗಳ ಪ್ರೋತ್ಸಾಹವೇ ಕಲಾವಿದರನ್ನು ಜೀವಂತವಾಗಿರಿಸುತ್ತದೆ. ಆದುದರಿಂದಲೇ ಹಿರಿ ವಯಸ್ಸಿನಲ್ಲೂ ನಾವು ನಿಮ್ಮನ್ನು ರಂಜಿಸುವಲ್ಲಿ ಯಶ ಕಂಡಿದ್ದೇವೆ. ಕಲಾಮಾತೆಯನ್ನು ಪ್ರೋತ್ಸಾಹಿಸುವ ಈ ಸಂಸ್ಥೆಯು ಭಾಷೆ ಮತ್ತು ಸಂಸ್ಕೃತಿಯ ಪೋಷಣೆಗಾಗಿ ನೂರ್ಕಾಲ ಬಾಳಲಿ ಎಂದು ಶುಭಾರೈಸಿದರು.

mca-4

ಇದೇ ಶುಭಾವಸರದಲ್ಲಿ ಸಾಧಕರಾದ ಅಸೋಸಿಯೇಶನ್‍ನ ಸ್ಥಾಪಕ ರೂವಾರಿ ಅಲೋಸಿಯಸ್ ಸಲ್ಡಾನ್ಹಾ (ಲೂವಿ ಉರ್ವಾ), ಸಮುದಾಯಭಿವೃದ್ಧಿ ಸಂಘಟಕರಾದ ಪ್ರೆಸಿಲ್ಲಾ ಬ್ರಾಗ್ಸ್ ಅವರನ್ನು ಸತ್ಕರಿಸಲಾಯಿತು. ಅಂತೆಯೇ ಅಸೋಸಿಯೇಶನ್‍ನ ಸ್ಥಾಪಕ ಕಾರ್ಯಕಾರಿ ಸಮಿತಿ ಸದಸ್ಯೆ ಸಬಿನಾ ಎ.ಡಿ’ಸೋಜಾ ಮತ್ತು ಸದಸ್ಯೆ ಐರಿನ್ ರಸ್ಕೀನ್ಹಾ ಅವರಿಗೆ ಪುಷ್ಫ್ಪಗುಪ್ಚವನ್ನಿತ್ತು ಗೌರವಿಸಿ ಅಭಿನಂದಿಸಿದರು.

mca-2

ಕಾರ್ಯಕ್ರಮದಲ್ಲಿ ರೆ| ಫಾ| ರಿಚ್ಚರ್ಡ್ ಮಥಾಯಸ್(ಎಸ್‍ವಿಡಿ), ರೆ| ಫಾ| ನವೀನ್ ರೆಬೆಲ್ಲೊ (ಎಸ್‍ವಿಡಿ), ರೆ| ಫಾ| ಎಡ್ವಿನ್ ವಾಸ್, ಅಸೋಸಿಯೇಶನ್‍ನ ಕೋಶಾಧಿಕಾರಿ ಲಿನೆಟ್ಟಾ ರೋಡ್ರಿಗಸ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಜ್ಯೋತಿ ಮೊಂತೆರೋ ಮತ್ತು ಪ್ಯಾಟ್ರಿಕ್ ಎಂ.ಡಿ’ಸೋಜಾ, ನಿಧಿಸಂಗ್ರಹಣಾ ಕಾರ್ಯದರ್ಶಿ ಇಮ್ಮಾಕುಲಟ್ ಫೆರ್ನಾಂಡಿಸ್, ನ್ಯೂಸ್‍ಲೆಟರ್ ಸಂಪಾದಕ ಹೆರಾಲ್ಡ್ ಲೋಬೋ ಮತ್ತಿತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಪ್ಯಾಟ್ರಿಕ್ ಡಿ’ಸೋಜಾ ಸ್ವಾಗತಿಸಿದರು. ನ್ಯೂಸ್‍ಲೆಟರ್‍ನ ಸಹ ಸಂಪಾದಕಿ ಜೂಡಿತ್ ಮಿನೇಜಸ್ ಸಂಘದ ಏಳಿಗೆ ಹಾಗೂ ಕಾರ್ಯವೈಖರಿ ಪ್ರಸ್ತಾಪಿಸಿದರು. ಉಪಾಧ್ಯಕ್ಷ ಪ್ರವೀಣ್ ಪಿಂಟೋ ಇಜಯ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಡ್ನಾ ರೋಡ್ರಿಗಸ್ ವಂದನಾರ್ಪಣೆಗೈದರು.

mca-1

ವಾರ್ಷಿಕೋತ್ಸವ ಅಂಗವಾಗಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ರಚಿಸಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ ನಾಟಕ `ಮ್ಹಾತಾರೊ ಚರ್ಬೆಲಾ’ ಇದರ 74ನೇ ಪ್ರದರ್ಶನವನ್ನು ಫ್ರಾಂಕ್ ಪ್ರೊಡಕ್ಷನ್ ತಂಡವು ಪ್ರದರ್ಶಿಸಿತು. ಜೋಯ್ ಪಾಲಡ್ಕಾ ನಿರ್ದೇಶಿಸಿದ ನಾಟಕದಲ್ಲಿ ಪಾತ್ರದಲ್ಲಿ ಶ್ರೀಮತಿ ಬೆಟ್ಟಿ ನ್ಹಾಜ್, ಪೀಟರ್ ಪಾಯ್ಸ್ ಬಸ್ರೂರು, ಶ್ರೀಮತಿ ಜ್ಯೂಲಿ ವಾಜ್, ಗ್ರೆಗರಿ ಸಿಕ್ವೇರಾ ನಿಡ್ಡೋಡಿ, ಫೋರಾ ಡಿ’ಸೋಜಾ ಕಲ್ಮಾಡಿ, ಶಾಂತಿ ಬಾರ್ಬೊಜಾ ಬೊಳಿಯೆ, ಪೀಟರ್ ಕುಟಿನ್ಹೋ, ಕು| ರೋಯ್ಶಿ ಸಿಕ್ವೇರಾ ಪಾಲಡ್ಕ ನಟಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು.

(ಚಿತ್ರ / ವರದಿ : ರೊನಿಡಾ ಮುಂಬಯಿ)

By suddi9

Leave a Reply

Your email address will not be published. Required fields are marked *