ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ 5ರಂದು ನಡೆಯುವ ವಾರ್ಷಿಕ ಷಷ್ಠಿ ಮಹೋತ್ಸವ ಸಂಧರ್ಭದಲ್ಲಿ ಬೆಳ್ಳಿ ಹರಕೆ ಮಾರಾಟಕ್ಕೆ ಸಂಬಂಧಿಸಿದಂತೆ ಈ ಬಾರಿ ದೇವಳದ ವತಿಯಿಂದಲೇ ಅಧಿಕೃತವಾಗಿ ಬೆಳ್ಳಿ ಹರಕೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನಕ್ಕೆ ಬಂದ ಬೆಳ್ಳಿ ಹರಕೆಗಳನ್ನು ಪರಿಶೀಲಿಸಿದಾಗ ಇದು ಕಳಪೆ ಗುಣಮಟ್ಟದ ಬೆಳ್ಳಿ ಎಂಬುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ಸಮುದಾಯನ್ನು ಅವಗಣಿಸುವ ದುರುದ್ದೇಶ ಇರುವುದಿಲ್ಲ ಎಂದು ಪ್ರಭಾರ ಆಡಳಿತಾಧಿಕಾರಿ ಆಗಿರುವ ರಾಯಿ ಗ್ರಾಮ ಪಂಚಾಯಿತಿ ಪಿಡಿಒ ವೆಂಕಟೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *