ಕೈಕಂಬ: “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ” ಮಕ್ಕಳಿಗೂ ತಮ್ಮದೇ ಆದ ಹಕ್ಕುಗಳಿವೆ ಹಾಗೂ ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಮಕ್ಕಳಹಕ್ಕುಗಳ ಗ್ರಾಮಸಭೆಯನ್ನು ಮುತ್ತೂರು ಗ್ರಾ.ಪಂ. ಹಾಗೂ ಪ್ರಜ್ಞಾ ಸಲಹಾ ಕೇಂದ್ರದ ಸಹಯೋಗದೊಂದಿಗೆ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

3-vp-makkala-grama-sabhe

ವಿವಿಧ ಇಲಾಖೆಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ರಕ್ಷಣೆ ಹಾಗೂ ಅವರಿಗಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಉಷಾ ಡಿ. ಹಾಗೂ ಕು.ಮಾಲಿನಿ ಮಕ್ಕಳ ಹಕ್ಕು ಹಾಗೂ ಪೋಕ್ಸೊ ಕಾಯಿದೆ ಬಗ್ಗೆ ತಿಳಿಸಿದರು.

ಬಜಪೆ ಠಾಣಾ (ಎಎಸೈ) ಮಂಜಯ್ಯ ಭಂಡಾರಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಅಪಹರಣದ ಬಗ್ಗೆ ಸಂಶಯ ಕಂಡುಬಂದಲ್ಲಿ ಶಿಕ್ಷಕರು ಹಾಗೂ ಮನೆಯವರಿಗೆ ತಿಳಿಸುವಂತೆ ಕರೆ ನೀಡಿದರು.

ತಾ.ಪಂ ಸದಸ್ಯರಾದ ನಾಗೇಶ್ ಶೆಟ್ಟಿ, ಪಂ ಆಭಿವೃದ್ಧಿ ಅಧಿಕಾರಿ, ಅದ್ಯಕ್ಷ, ಕಾರ್ಯದರ್ಶಿ, ಹಾಗೂ ಸದಸ್ಯರು ಮಕ್ಕಳ ಸಮಸ್ಯೆಗಳ ವ್ಯಕ್ತಪಡಿಸುವಿಕೆಗೆ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಪ್ರಜ್ಞಾ ಸಲಹಾ ಕೇಂದ್ರ ಹಾಗೂ ಕೈಕಂಬ ವಲಯದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಪಂ ಅಭಿವೃದ್ಧಿ ಅಧಿಕಾರಿ ನೋಣು ಸ್ವಾಗತಿಸಿದರು. ಬೊಳಿಯಾ ಶಾಲಾ ಮಕ್ಕಳು, ಮಕ್ಕಳ ಅಪಹರಣ, ಸಾಗಾಟ, ಮಾರಾಟದ ಬಗ್ಗೆ ಜಾಗೃತಿ ಮೂಡಿಸಿ ಕಿರು ಪ್ರಹಸನ ಪ್ರದರ್ಶಿಸಿದರು.

By suddi9

Leave a Reply

Your email address will not be published. Required fields are marked *