ಕೈಕಂಬ: ಜಯ ಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮೇರಮಜಲು ಗ್ರಾ.ಪಂ. ಇದರ ವತಿಯಿಂದ ಭಾನುವಾರದಂದು “ಪ್ಲಾಸ್ಟಿಕ್ ಹೆಕ್ಕೋಣ” ಕಾರ್ಯಕ್ರಮ ಜರುಗಿತು.

7-vp-plastic

4

3

ಪ್ರಕೃತಿಯ ಮೇಲೆ ಪರಿಣಾಮ ಬೀಳುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಅನಿವಾರ್ಯವಾಗಿ ನಾವು ಬಳಸುವ ಪ್ಲಾಸ್ಟಿಕನ್ನು ಎಲ್ಲೂ ಬಿಸಾಡದೇ ಸ್ವಚ್ಛಗೊಳಿಸಿ ಒಣಗಿಸಿ ಪ್ರತ್ಯೇಕವಾಗಿ ಗೋಣಿಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡು ಗ್ರಾಮ ಪಂಚಾಯತ್‍ಗೆ ತಲುಪಿಸಬೇಕು ಎಂಬ ಮಾಹಿತಿಯನ್ನು ನೀಡಿ, ಕೊಡ್ಮಾಣ್ ಜಂಕ್ಷನ್ ನಿಂದ ಬೆಂಜನಪದವು ಕೆನರಾ ಕಾಲೇಜಿನವರೆಗೆ ಸ್ವಚ್ಛತೆಯನ್ನು ಮಾಡಲಾಯಿತು.

1

2

ಈ ಸಂದರ್ಭದಲ್ಲಿ ಬಂಟ್ವಾಳ ಸಂಘ ಚಾಲಕ ಕಾಂತಪ್ಪ ಶೆಟ್ಟಿ ಕೊಡ್ಮಾಣ್, ಮೇರಮಜಲು ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯ್ಗ, ಪಂ.ಉಪಾಧ್ಯಕ್ಷೆ ಜಯಶ್ರೀ ಕರ್ಕೇರ, ಗ್ರಾ.ಪಂ.ಸದಸ್ಯರಾದ ದಯಾನಂದ ಕಾಪಿಕಾಡ್, ನಳಿನಾಕ್ಷಿ, ಪವನ್ ಕುಮಾರ್ ಅಬ್ಬೆಟ್ಟು, ವಿನೋದ್, ರವಿ, ಚಂದ್ರಾವತಿ, ಮುರಳಿ, ಸಂತೋಷ್ ಕೊಡ್ಮಾಣ್, ದಾಮೋದರ್ ನೆತ್ತೆರ್‍ಕೆರೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *