ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇಆರ್‍ಡಬ್ಲ್ಯುಸಿ ಯೋಜನೆಯಡಿಯಲ್ಲಿ ಕೈಕಂಬ ವಲಯದ ಮಕ್ಕಳ ಹಕ್ಕುಗಳ ಸಂಘದ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಕುಪ್ಪೆಪದವು ಆಶಾಕಿರಣ ಚರ್ಚ್ ಹಾಲ್‍ನಲ್ಲಿ ಆಯೋಜಿಸಲಾಯಿತು.
ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸರಕಾರಿ ಶಾಲೆಗಳಿಂದ ಆಗಮಿಸಿದ ಮಕ್ಕಳು ವೈಯಕ್ತಿಕ ಹಾಡು, ಸಾಮೂಹಿಕ ಹಾಡು, ಭಾಷಣ, ರಂಗೋಲಿ, ಭಿತ್ತಿಪತ್ರ ತಯಾರಿ, ಕಿರು ಪ್ರಹಸನಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕಿ ರೇಷ್ಮಾ ಜೋಗಿ ಹಾಗೂ ನೀರುಮಾರ್ಗ ವಲಯದ ಕಾರ್ಯಕರ್ತೆ ಶೀಲಾ ಬಿ.ಶೆಟ್ಟಿ ತೀರ್ಪುಗಾರರಾಗಿದ್ದರು. ಕೈಕಂಬ ವಲಯದ ಕಾರ್ಯಕರ್ತೆಯರಾದ ಪಾಲಾಕ್ಷೀ, ಹಾಗೂ ಸೀತಾಲಕ್ಷ್ಮೀ ಮತ್ತು ಎಲ್ಲಾ ಶಾಲಾ ಶಿಕ್ಷಕರು-ಮಕ್ಕಳು ಉಪಸ್ಥಿತರಿದ್ದರು. ವಲಯ ಸಂಯೋಜಕ ಈಶ್ವರ್ ಸ್ವಾಗತಿಸಿದರು.

