ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವಾಪ್ತಿಯ ಮಕ್ಕಳ ಗ್ರಾಮ ಸಭೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮೀಜಿ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆದಿದ್ದು, ಈ ವೇಳೆ ಮಕ್ಕಳು ತಮ್ಮ ಹಲವು ಸಮ್ಯೆಗಳನ್ನು ಅಧಿಕಾರಗಳ ಮುಂದೆ ತಂದರಲ್ಲದೆ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಸಲಹೆ ಸೂಚನೆ ನೀಡಿದರು.

makkala-1
ಆರೋಗ್ಯ ಅಧಿಕಾರಿ ರುದ್ರಪ್ಪ ಮಾತಾಡಿ, ಮಕ್ಕಳಿಗೆ ಹುಳದ ಮಾತ್ರೆ, ಕಬ್ಬಿಣಾಂಶದ ಮಾತ್ರೆ, ಒದಗಿಸಲಾಗುತ್ತಿದೆ. ರಕ್ತಹೀನತೆ, ಆರೋಗ್ಯ ಸಮಸ್ಯೆ, ದೈಹಿಕ ಬಲಲಾವಣೆಯಂಥಾ ಸಮಸ್ಯೆಗಳಾದರೆ ಸ್ನೇಹಾ ಕ್ಲಿನಿಕ್ ಮೂಲಕ ಚಿಕಿತಸೆ ನೀಡಲಾಗುತ್ತದೆ. ಆರರಿಂದ ಹತ್ತನೇ ತರಗತಿ ವಿದ್ಯಾರ್ಥಿನಿಗಳಿಗೆ ನ್ಯಾಪ್‍ಕಿನ್ ಒದಗಿಸಲಾಗುತ್ತದೆ ಎಂದು ವಿವರಿಸಿದರು.

ಪಡಿ ಸಂಸ್ಥೆಯ, ಸಮಾಜ ಸೇವಕಿ ನಂದಾ ಪಾಯಸ್ ಮಾತಾಡಿ, ಮಕ್ಕಳ ಹಕ್ಕುಗಳು, ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಮಸ್ಯೆಗಳಿದ್ದರೆ ಮಕ್ಕಳ ಸಹಾಯವಾಣಿ 1098 ನಂಬರ್‍ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲಕಾರ್ಮಿಕ ಪದ್ಧತಿ ಇತ್ಯಾದಿ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಲೈಂಗಿ ದೌರ್ಜನ್ಯ ತಡೆ ಕಾಯ್ದೆ ಫೋಕ್ಸೋ ಇದರ ಮಾಹಿತಿ ನೀಡಿದರಲ್ಲದೆ, ಇಂಥಾ ಪ್ರಕರಣ ದಾಖಲಾದರೆ ಆರೋಪಿಗಳಿಗೆ ಶಿಕ್ಷೆ ಒದಗಿಸಬೇಕೆಂದರು. ಮಕ್ಕಳ ಮುಟ್ಟಬಾರದ ಅಂಗಗಳ ಬಗ್ಗೆ ಸ್ಪಷರ್ಷದ ಬಗ್ಗೆ ಮಾಹಿತಿ ನೀಡಿದರು.

makkala-2ಅಂಗನವಾಡಿ ಮೇಲ್ವಿಚಾರಕಿ ಚಂದ್ರಾವತಿ ಮಾತಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಯಗ್ಗೆ ಮಾಹಿತಿ ನೀಡಿದರು. ಮಕ್ಕಳ ಸ್ನೇಹಿ ಪೊಲೀಸ್ ಅಧಿಕಾರಿ ಪ್ರಕಾಶ್ ಮಾತಾಡಿ, ನಾವೆಲ್ಲಾ ಮನುಷ್ಯರಾಗೋಣ, ಮಕ್ಕಳ ಹಕ್ಕುಗಳ ಉಳಿಸಲು ಪೊಲೀಸ್ ಇಲಾಖೆ ಬದ್ದವಾಗಿದೆ ಎಂದರು.

ಕಂದಾವರ ಗ್ರಾಮ ಪಂಣಚಾಯತ್ ಅಧ್ಯಕ್ಷೆ ವಿಜಯಗೋಪಾಲ ಸುವರ್ಣ, ಪಿಡಿಓ, ಶಾಲಾ ಶಿಕ್ಷಕರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ವ್ಯಾಪ್ತಿಯ ಹಲವು ಶಾಲೆಯ ಮಕ್ಕಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *