ಬಂಟ್ವಾಳ: ಸತ್ಯ ಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಇದರ ವತಿಯಿಂದ ಬೊಳ್ಳುಕಲ್ಲುವಿನಲ್ಲಿ ನಡೆದ 10 ತಂಡಗಳ ಅಹ್ವಾನಿತ ತಂಡಗಳ ಪ್ರಿಮೀಯರ್ ವಾಲಿಬಾಲ್ ಪಂದ್ಯಾಟವನ್ನು ಯುವ ವೇದಿಕೆ ಪೆರಾಜೆ ಇದರ ಸಂಚಾಲಕ ರಾಜಾರಾಮ್ ಕಡೂರು ದೀಪ ಬೆಳಗಿಸಿ ಉದ್ಘಾಟಿಸಿದರು.

12

ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಮಾನಸಿಕ ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಸಾದ್ಯ ಎಂದರು. ಪರಸ್ಪರ ಪ್ರೀತಿ, ಬಾಂಧವ್ಯ ಮತ್ತು ಒಗ್ಗಟ್ಟು ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಯುವಕರು ಒಗ್ಗಟ್ಟಾಗಿ ಇಂತಹ ಕ್ರೀಡೆಯ ಮೂಲಕ ಸಾಮಾಜಿಕ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಕೃಷಿಕ ಅಪ್ರಾಯ ಪೈ ಬುಡೋಳಿ ಅವರು ವಹಿಸಿದ್ದರು. ವಾಲಿಬಾಲ್ ಅಂಕಣವನ್ನು ಮಾಣಿ ಕ.ಪ್ರೌ.ಶಾಲೆಯ ದೈಹಿಕ ಶಿಕ್ಷಕ ಗಂಗಾದರ ರೈ ಸೇರಾ ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಂಜುಳಾ ಕುಶಲ ಮಂಜೋಟ್ಟಿ, ಪೆರಾಜೆ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ರೈ , ಭಾರತೀಯ ಜನತಾ ಪಾರ್ಟಿಯ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ವಿನೀತ್ ಶೆಟ್ಟಿ, ಸತ್ಯ ಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಇದರ ಅಧ್ಯಕ್ಷ ಅಣ್ಣಿ ಪೂಜಾರಿ, ಪರ್ತಕರ್ತ ಕಿಶೋರ್ ಪೆರಾಜೆ ಉಪಸಿತರಿದ್ದರು. ಜನಾರ್ಧನ ಸ್ವಾಗತಿಸಿ, ಸುಮಂತ್ ವಂದಿಸಿದರು. ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *