ಬಂಟ್ವಾಳ : ಡಿ.1ರಂದು ಬಂಟ್ವಾಳ ತಾಲೂಕು ಕಛೇರಿ ಕಟ್ಟಡದಲ್ಲಿ ಎ.ಸಿ.ರೇಣುಕಾ ಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹಾಗೂ 5 ಗ್ರಾಮಗಳ ಬೆರಳೆಣಿಕೆಯ ಸಂತ್ರಸ್ತರ ಸಮಕ್ಷಮದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಹಾಗೂ ಇತರ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ಗುಟ್ಟಾಗಿ ಸಭೆ ನಡೆಸಿರುತ್ತಾರೆ.
ಈ ಹಿಂದೆ ಮಲಾಯಿಬೆಟ್ಟು ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿದ ಹಿಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಸಮಕ್ಷಮದಲ್ಲಿ ಒಂದು ಸಭೆ ಕರೆದು 7ಮೀ.ಮುಳುಗಡೆ ಪ್ರದೇಶ ಮತ್ತು 1 ಮೀ. ಶೀತರ ಪ್ರದೇಶ ಒಟ್ಟು 8 ಮೀ.ನಲ್ಲಿ ವಾಸ್ತವ್ಯವಿರುವ ಸಂತ್ರಸ್ತರಿಗೆ ಪರಿಹಾರ ನೀಡಬೇಕು.
ಸಂತ್ರಸ್ತರಲ್ಲದ ವ್ಯಕ್ತಿಗಳನ್ನು ಕುಳ್ಳಿರಿಸಿದರೂ ಸಂತ್ರಸ್ತರು ನಿಯೋಜಿತ ಗ್ರಾಮ ಪ್ರತಿನಿ„ಗಳಾದ ಎಂ.ಸುಬ್ರಹ್ಮಣ್ಯ ಭಟ್, ಸುದೇಶ್ ಮಯ್ಯ ಸಭೆಯಿಂದ ಹೊರ ನಡೆಯುವಂತೆ ಹೇಳಿರುವುದು ತುಘಲಕ್ ಆಡಳಿತ ಮಾದರಿಯಾಗಿದೆ. ಒಡೆದು ಆಳುವ ತಂತ್ರವನ್ನು ಅನುಸರಿಸಿ ರೈತರನ್ನು ವ್ಯವಸ್ಥಿತವಾಗಿ ವಂಚನೆ ಮಾಡುವ ಈ ಪ್ರವೃತ್ತಿಯನ್ನು ರೈತರು ಒಕ್ಕೊರಲಿನಿಂದ ಖಂಡಿಸಿರುತ್ತಾರೆ.
ಸಭೆ ನಡೆಸುವ ಮೊದಲು ಮಂಗಳೂರು ಮಹಾನಗರ ಪಾಲಿಕೆಯವರು ಸಂತ್ರಸ್ತ ರೈತರಿಗೆ ನೋಟೀಸ್ ಅವರು ಸರ್ವೆ ಕಾರ್ಯ ಮಾಡುವ ಸಮಯದಲ್ಲಿ ರೈತರನ್ನು ಒಮ್ಮತಕ್ಕೆ ತೆಗೆದುಕೊಂಡು ಅವರ ಸಮಕ್ಷಮದಲ್ಲಿ ಸರ್ವಕಾರ್ಯ ನಡೆಸಿ ಗಡಿ ಗುರುತು ಮಾಡಬೇಕೆಂದು ಆದೇಶಿಸಿದ್ದರು.
ಆದರೆ ಆ ನಂತರ ಅಧಿಕಾರಕ್ಕೆ ಜಲದಿಂದ ಜಿಲ್ಲಾ„ಕಾರಿ ಜಗದೀಶ್ ಅವರು ಮುಳುಗಡೆ ಪ್ರದೇಶದಲ್ಲಿ ರೈತರ ಸಭೆ ಜರಗಿಸಿ ರೈತರಿಗೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದು ಡಿ.1ರಂದು ಮೌಖಿಕ ಆಮಂತ್ರಿತ ಸಂತ್ರಸ್ತ ರೈತರನ್ನು ಮಾತ್ರ ಸೇರಿಸಿ ಗ್ರಾಮಕ್ಕೆ ಒಬ್ಬ ಪ್ರತಿನಿಧಿ ಆಯೋಜಿಸಲ್ಪಟ್ಟಿದ್ದರೂ ಅವರನ್ನು ಸಭೆಯಿಂದ ಹೊರಹೋಗುವಂತೆ ಎ.ಸಿ.ಹಾಗೂ ತಹಶೀಲ್ದಾರರು ದಬ್ಬಾಳಿಕೆಯಿಂದ ಹೊರಹಾಕಿ ,ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರು ರೈತರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಆಕ್ಷೇಪಿಸಿದಾಗ ಪೊಲೀಸ್‍ಸರ್ಪಗಾವಲಲ್ಲಿ ಕಛೇರಿಗೆ ಬಾಗಿಲು ಹಾಕಿ ಸಭೆ ಮುಂದುವರಿಸಿದರು. ರೈತರನ್ನು ಕತ್ತಲಲ್ಲಿಟ್ಟು ಪ್ರಜಾಪ್ರಭುತ್ವ ವಿರೋ„ ರೀತಿಯಲ್ಲಿ ಸಭೆ ಜರಗಿಸುವ ಔಚಿತ್ಯವನ್ನು ರೈತರು ಪ್ರಶ್ನಿಸಿ ಈ ಘಟನೆಯನ್ನು ಖಂಡಿಸಿರುತ್ತಾರೆ.
