ಮೂಡುಬಿದಿರೆ: ಎರಡು ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಬೆದರಿಕೆಯೊಡ್ಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

no_crime

ಪುಚ್ಚೆಮೊಗರು ಶಾಂತಿರಾಜ ಕಾಲೋನಿಯಲ್ಲಿ ಫೈಜಲ್ ಎಂಬಾತ ಹೊಸ ಮನೆ ಕಟ್ಟುತ್ತಿದ್ದು, ಅದರಕ್ಕೆ ಈ ಹಿಂದೆ ಜಗದೀಶ್ ಎಂಬವರು ಮರದಕೆಲಸ ಮಾಡುತ್ತಿದ್ದರು.. ಆ ಬಳಿಕ ಬೇರೆಯವರ ಬಳಿ ಫೈಜಲ್ ಮರದ ಕೆಲಸ ಮಾಡಿಸುತ್ತಿದ್ದು, ಜಗದೀಶ್ ತನಗೆ ಬರಬೇಕಾದ 25 ಸಾವಿರ ರೂಪಾಯಿಯನ್ನು ಫೈಜಲ್ ಬಳಿ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಫೈಜಲ್ ಜಗದೀಶ್‍ಗೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವುದಾಗಿ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಫೈಜಲ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೋಟೆಬಾಗಿಲಿನ ಜಮೀರ್ ಎಂಬಾತ ತನ್ನ ಸಹಪಾಠಿ ಪಡುಮಾರ್ನಾಡು ಸಂಜಯ್ ಎಂಬವನ ಜೊತೆ ಮನಸ್ತಾಪಗೊಂಡು, ಬೆದರಿಕೆಯೊಡ್ಡಿರುವುದಾಗಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಲಡಾಗಿದೆ. ಆರೋಪಿ ಜಮೀರ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *