ಮೂಡುಬಿದಿರೆ: ಬೆಳ್ಮಣ್, ಪಾಲಡ್ಕ ಪ್ರದೇಶಗಳಿಗೆ ಮೂಡುಬಿದಿರೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಪುತ್ತಿಗೆ ಧ್ವಾರದ ಬಳಿ ಬೃಹತ್ ಮರವೊಂದು ಮಂಗಳವಾರ ಮಧ್ಯಾಹ್ನ ವೇಳೆ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

mara

ಮರ ಬೀಳುವ ಸಮಯ ಮೂಡುಬಿದಿರೆ ಕಡೆಯಿಂದ ಬರುತ್ತಿದ್ದ ಲಾರಿಯೊಂದು ನೂರು ಮೀ. ಅಂತರದಲ್ಲಿದ್ದು ಅವಘಡವಾಗುವುದು ತಪ್ಪಿದೆ. ವಾಹನಗಳು ಒಂಟಿಕಟ್ಟೆ, ಪುತ್ತಿಗೆ ಮಾರ್ಗವಾಗಿ ಚಲಿಸಿದವು. ಸ್ಥಳೀಯರು ಮರವನ್ನು ತೆರವುಗಳಿಸಿದರು.

By suddi9

Leave a Reply

Your email address will not be published. Required fields are marked *