ಮೂಡುಬಿದಿರೆ: ಸೂಕ್ಷ್ಮವಾಗಿ ಗಮನಿಸಿದಾಗ ಸೇಮ್ ಸ್ಕೈ ಅವರ ಬ್ಲೂಸ್ ಚಾಕಲೇಟ್ ರ್ಯಾಪರೊಳಗೆ ಜೀವಂತ ಹುಳು ಚಾಕಲೇಟ್‍ನಲ್ಲಿ ಓಡಾಡುತ್ತಿದ್ದ ಘಟನೆಯೊಂದು ಗ್ರಾಹಕರ ಗಮನಕ್ಕೆ ಬಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ಈ ಬಗ್ಗೆ ಪರಿಶೀಲಿಸುವಂತೆ ಮಾಧ್ಯಮದ ಮುಂದಿಟ್ಟಿರುವ ಪ್ರಕರಣ ಮಂಗಳವಾರ ಸಂಜೆ ನಡೆದಿದೆ. ಇಲ್ಲಿನ ಕಲ್ಸಂಕ ರಸ್ತೆ ಬಳಿಯಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯೊಂದರಲ್ಲಿ ಎರಡು ಪ್ರತ್ಯೇಕ ದಿನ ಖರೀದಿಸಿದ ಚಾಲಕೇಟ್‍ಗಳಲ್ಲಿ ಜೀವಂತ ಹುಳು ಇರುವುದು ಗಮನಕ್ಕೆ ಬಂದಿದೆ.

choclate

ಸೋಮವಾರ ಸಂಜೆ ಶಿಕ್ಷಕರೊಬ್ಬರು ಈ ಅಂಗಡಿಯಿಂದ ರೂ 5ರ ಬೆಲೆಯ ಸೇಮ್‍ಸ್ಕೈ ಕಂಪೆನಿಯ ಎರಡು ‘ಬ್ಲೂಸ್’ ಚಾಕಲೇಟು ಖರೀದಿಸಿದ್ದರು. ಮಧ್ಯಾಹ್ನ ಶಾಲೆಯ ಬಿಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಕ್ಷಮ ಚಾಕಲೇಟಿನ ರ್ಯಾಪರನ್ನು ಬಿಡಿಸಿನೋಡಿದಾಗ ಒಂದು ಚಾಕಲೇಟಿನಲ್ಲಿ ಜೀವಂತ ಹುಳಗಳು ಪತ್ತೆಯಾದವೆನ್ನಲಾಗಿದೆ.

ಭಾನುವಾರ ಇದೇ ಅಂಗಡಿಯಿಂದ ಈ ಶಾಲೆಯ ಸಿಬಂದಿಯೊಬ್ಬರು ಖರೀದಿಸಿದ್ದ 5 ಬ್ಲೂಸ್ ಚಾಕಲೇಟ್‍ಗಳ ಪೈಕಿ 2 ಚಾಕಲೇಟುಗಳಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಬಗ್ಗೆ ಶಿಕ್ಷಕರು ಸೋಮವಾರ ಸಂಜೆ ಸದ್ರಿ ಅಂಗಡಿಯವರಿಗೆ ಸಾಕ್ಷಿ ಸಮೇತ ವಿಷಯವನ್ನು ತಿಳಿಸಿದಾಗ ಚಾಕಲೇಟು ವಾಪಾಸು ಕೊಡಿ ಕಂಪೆನಿಗೆ ದೂರು ಕೊಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಚಾಕಲೇಟಿನ ರ್ಯಾಪರಲ್ಲಿರುವ ಮಾಹಿತಿಯಂತೆ ಕರ್ನಾಟಕದ ಕಂಪೆನಿಯೊಂದರ ಈ ಆಹಾರ ಉತ್ಪನ್ನದಲ್ಲಿ ಹೀಗೇಕಾಯಿತು ಎನ್ನುವುದನ್ನು ತುರ್ತಾಗಿ ಸಂಬಂಧಿತರು ಪರಿಶೀಲಿಸುವ ಅಗತ್ಯವಿದೆ. ಎಳೆಯ ಮಕ್ಕಳು, ಕೆಲವೊಮ್ಮೆ ಹಿರಿಯರು ಕೂಡಾ ರ್ಯಾಪರ್ ಬಿಡಿಸಿ ಚಾಕಲೇಟನ್ನು ಬಾಯಿಗೆ ಹಾಕಿಕೊಳ್ಳುವುದೇ ಸಾಮಾನ್ಯವಾಗಿರುವಾಗ ಹೀಗೆ ಹುಳ ಓಡಾಡಿದರೆ ಅದರ ಅಡ್ಡ ಪರಿಣಾಮಗಳು, ಅಪಾಯದ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.

By suddi9

Leave a Reply

Your email address will not be published. Required fields are marked *