ಉಳ್ಳಾಲ: ನಮ್ಮ ದೇಶದಲ್ಲಿ ಒಂದು ಒತ್ತಿನ ಅನ್ನಕ್ಕಾಗಿ ಬರಗಾಲವಿಲ್ಲ ಎಂಬ ರಾಜಕಾರಣಿಗಳ ಮಾತು ಸುಳ್ಳು ದೇಶದಲ್ಲಿ ಬೀಡಿ ನಮ್ಮ ತಾಲೂಕುನಲ್ಲಿ ಎದೆಷ್ಟೋ ಕುಟುಂಬಗಳು ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಸ್ಥಿತಿಯನ್ನು ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಕಣ್ಣಾರೆ ಕಂಡು ಇಂದು ಸಮಾರು ಕುಟುಂಬಗಳಿಗೆ ಪಡಿತರ ಮತ್ತು ದಿನ ಬಳಕೆ ವಸ್ತುಗಳನ್ನು ವಿತರಿಸುತ್ತ ಬಂದಿದೆ. ಇಂತಹ ಕಾರ್ಯ ಶ್ಲಾಘನಿಯ ಎಂದು ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಮತ್ತು ಸಯ್ಯದ್ ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ಸರ್ವಿಸ್ ವತಿಯಿಂದ ಡಿ, 2ಮತ್ತು 3ರಂದು ಮಂಜನಾಡಿ ಅಲ್-ಮದೀನದಲ್ಲಿ ನಡೆಯುವ ಹುಬುರ್ರಸೂಲ್ ಕಾರ್ಯಕ್ರಮದ ಪ್ರಚಾರರ್ಥ ಬಂಟ್ವಾಳದ ಬಡ ಕುಟುಂಬದ ನಿರ್ವನೆಗಾಗಿ 20,000ರೂಪಾಯಿಯ ಚೆಕ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಕಾರ್ಯಕ್ರಮ ಉದ್ಘಾಟಿಸಿದರು. ಸುನ್ನಿ ಕಾರ್ಯಕರ್ತ ಅಬ್ದುಲ್ ನಾಸೀರ್ ಕಲ್ಕಟ್ಟ ಬಡ ಕುಟುಂಬಕ್ಕೆ ಚೆಕ್ ವಿತರಿಸಿದರು.
ಉದ್ಯಮಿ ಹಾಜಿ ಅಬ್ದುಲ್ ಖಾದರ್ ಸ್ವದೇಶಿ, ಸಮಾಜ ಸೇವಕ ಫಾರೂಕ್ ಮಂಚಿಲ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಸದಸ್ಯ ಸಮೀರ್ ತೊಕ್ಕೋಟ್ಟು, ಎಸ್ಸೆಸ್ಸೆಫ್ ಮುಕ್ಕಚೇರಿ ಶಾಖೆ ಸದಸ್ಯ ಹನೀಫ್, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಕಾರ್ಯದರ್ಶಿ ಜುನೈದ್ ಪಟ್ಲ ಈ ಸಂದರ್ಭ ಉಪಸ್ಥಿತರಿದರು. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಸ್ವಾಗತಿಸಿ. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.

