ಉಳ್ಳಾಲ: ದಾರಿತಪ್ಪುತ್ತಿರುವ ಯುವಸಮುದಾಯವನ್ನು ಸರಿ ದಾರಿಗೆ ತರುವ ಕೆಲಸ ಹಿರಿಯ ಮುಸ್ಲಿಂ ಮುಖಂಡರಿಂದ ಆಗಬೇಕಿದೆ ಎಂದು ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಹೇಳಿದರು. ಅವರು ಎಸ್‍ವೈಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಪಜೀರ್ ಶಾಖೆ ಇದರ ಐದನೇ ವಾರ್ಷಿಕದ ಪ್ರಯುಕ್ತ ನೆಡದ ಏಕದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದರು.

ಅವರು ಎಸ್‍ವೈಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಪಜೀರ್ ಘಟಕದ ಐದನೇ ವಾರ್ಷಿಕದ ಪ್ರಯುಕ್ತ ಪಜೀರ್ ಶಂಸುಲ್ ಉಲಮಾ ನಗರದಲ್ಲಿ ಭಾನುವಾರ ಅಯೋಜಿಸಿದ ಏಕದಿನ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಗೈದರು. ಮುಸ್ಲಿಂ ಯುವಕರು ಗಾಂಜ ಮುಂತಾದ ಮಾದಕ ವ್ಯಸನಗಳ ದಾಸರಾಗುತ್ತಿದ್ದು, ಇದು ಮುಂದುವರಿದಲ್ಲಿ ಇಸ್ಲಾಂ ಧರ್ಮದ ನೀತಿ ನಿಯಮಗಳು ಭೂಮಿಯಲ್ಲಿ ನೆಲೆನಿಲ್ಲಲು ಸಾಧ್ಯವಿಲ್ಲ. ಧರ್ಮದ ನೀತಿ ನಿಯಮಗಳಿಗೆ ಬದ್ದವಾಗಿ ಬದುಕಿದಾಗ ಇಸ್ಲಾಂ ಧರ್ಮದ ಮಹತ್ವವನ್ನು ಉಳಿಸುವ ಕಾರ್ಯ ಆಗುವುದು.

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಿನ್ಸಿಪಾಲ್ ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ, ಶರೀಯತ್ ವಿವಾದ ವಿಚಾರ ಭಾರತ ದೇಶದ ಮುಸಲ್ಮಾನರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ದೇಶದ ಎಲ್ಲಾ ಮುಸ್ಲಿಮರು ಒಂದಾಗಿ ಹೋರಾಡಿದಾಗಿ ಮಾತ್ರ ಕಾನೂನಿನಿಂದ ವಿಮುಕ್ತಿ ಹೊಂದಿ ವಿಜಯ ಸಾಧಿಸಲು ಸಾಧ್ಯ ಎಂದರು.
ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಎಸ್‍ವೈಎಸ್ ಪಜೀರ್ ಘಟಕ ಅಧ್ಯಕ್ಷ ಸಿ.ಎಚ್ ಮೊೈದೀನ್ ಕುಂಞ ಪಜೀರ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಸ್ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಅತೂರು ದುಅ ನೇರವೆರಿಸಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಖಾಸಿಂ ಬಾವ ಪಜೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಶ್ಹೂರು ಮಂಜೇಶ್ವರ ಸಯ್ಯಿದ್ ಬದ್ರುದ್ದೀನ್ ತಂಙಳ್, ದ.ಕ ಸಮಸ್ತ ಮುಶಾವರ ಸದಸ್ಯರಾದ ಇಬ್ರಾಹೀಂ ಬಾಖವಿ ಕೆ.ಸಿ ರೋಡ್, ಅದಂ ದಾರಿಮಿ, ದೇರಳಕಟ್ಟೆ ರೇಂಜ್ ಅಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ಮಂಗಳೂರು ತಾ.ಪಂ ಅಧ್ಯಕ್ಷ ಮೊಹಮ್ಮದ್ ಮೋನು, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ತಾ.ಪಂ ಮಾಜಿ ಸದಸ್ಯ ಮುಸ್ತಫ ಮಲಾರ್, ಉಪ್ಪಿನಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫ ಹಾಜಿ ಕೆಂಪಿ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ರಶೀದ್ ಹಾಜಿ, ಪಜೀರ್ ಗ್ರಾ.ಪಂ ಸದಸ್ಯ ಕೆ.ಮೊಹಮ್ಮದ್ ರಫಿಕ್, ಉದ್ಯಮಿ ಬಾತಿಷ್ ಪಾಟ್ರಕೋಡಿ, ಉಮರ್ ಪಜೀರ್, ಪಜೀರ್ ಗ್ರಾ.ಪಂ ಅಧ್ಯಕ್ಷ ಎಂ. ಸೀತಾರಾಂ ಶೆಟ್ಟಿ, ಶಂಸುಲ್ ಉಲಮಾ ಕಾಲೇಜಿನ ಕಾರ್ಯದರ್ಶಿ ಇಸ್ಹಾಕ್ ಹಾಜಿ ನಾಟೆಕಲ್, ಉದ್ಯಮಿ ಬಿ.ಎಚ್ ಮುಹಮ್ಮದ್ ಮೂಡಿಗೆರೆ, ಬೆಳ್ಮ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ನಿರ್ದೇಶಕ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಪಜೀರ್ ಗ್ರಾ.ಪಂ ಸದಸ್ಯ ಇಮ್ತಿಯಾಝ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಸಯ್ಯದಾಲಿ ದೇರಳಕಟ್ಟೆ, ಮುಡಿಪು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಟಿ.ಆರ್ ಅಬ್ದುಲ್ ರಝಾಕ್, ಯುವ ಕಾಂಗೇಸ್ ಮಂಗಳೂರು ವಲಯ ಕಾರ್ಯದರ್ಶಿ ಅಬೂ ಶಮೀರ್ ಪಜೀರ್, ಜೆ.ಎಫ್.ಎ ಅಧ್ಯಕ್ಷ ಹಸನ್ ಪಜೀರ್ ಬಾವ, ಬದ್ಯಾರ್ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಇಬ್ರಾಹೀಂ ಬದ್ಯಾರ್ ಉಪಸ್ಥಿತರಿದರು.

ದೇರಳಕಟ್ಟೆ ರೇಂಜ್ ಪ್ರ.ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು. ನೌಷದ್ ಬದ್ಯಾರ್ ವಂದಿಸಿದರು. ಪಯ್ಯಕಿ ವಿದ್ಯಾರ್ಥಿ ಅದ್ನಾನ್ ಕಾರ್ಯಕ್ರಮ ನಿರೂಪಿಸಿದರು.
