ಕೈಕಂಬ: ಕರ್ನಾಟಕ ಸರಕಾರದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಗ್ರಾಮ ಪಂಚಾಯತ್ ಗುರುಪುರ ವತಿಯಿಂದ ಗುರುಪುರ ಕುಕ್ಕುದಕಟ್ಟೆ ಮರಂಕರಿಯ ಬೈಲುಪಳ್ಳಿ ರಸ್ತೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಉದ್ಘಾಟಿಸಿದರು.
ಜಿ.ಪಂ ಸದಸ್ಯ ಯುಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ್ಪ, ಗುರುಪುರ ಗ್ರಾ.ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಉದಯ ಭಟ್, ಇಂಜಿನಿಯರ್ ಜಯಾನಂದ ಪೂಜಾರಿ, ಮೀನುಗಾರಿಕ ಅಭಿವೃದ್ಧಿ ನಿರ್ದೇಶಕ ಅಬ್ದುಲ್ ಅಜೀಜ್ ಬಾಷಾ, ಉದ್ಯಮಿ ನಿಟ್ಟೆಗುತ್ತು ರವಿರಾಜ್, ಏತಮೊಗರು ಗುತ್ತು ಗಡಿಕಾರರು ಜಯಣ್ಣ, ಗುರುಪುರ ಪಂಚಾಯತ್ ಸದಸ್ಯೆ ಶರ್ಮಿಲಾ, ಸದಸ್ಯ ಎ.ಕೆ. ಅಶ್ರಫ್, ಬೈಲು ಮಸೀದಿಯ ಅಧ್ಯಕ್ಷ ಸಲೀಂ, ವಿಜಯ ಗೋಪಾಲ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

