ಕೈಕಂಬ: ದ.ಕ. ಉಡುಪಿ ಜಿಲ್ಲೆಗಳನ್ನೊಳಗೊಂಡ ಕೃಷಿಕರ ಜಾನಪದ ಆಚರಣೆಯ ಕಂಬಳಗಳು ನಿಷೇಧಗೊಳಪಟ್ಟಿದೆ. ಜಲ್ಲಿಕಟ್ಟು ಹಾಗೂ ಎತ್ತು , ಕೋಣ ಮತ್ತು ಕಂಬಳ ಒಂದೇ ವಿಭಾಗ ಎಂದು ಪರಿಗಣಿಸಿ ನಿಷೇಧಿಸುತ್ತಾರೆ. ನಿಜವಾಗಿಯೂ ಕೋಣಗಳ ಸಂತತಿ ಮತ್ತು ಎತ್ತುಗಳ ಸಂತತಿ ಬೇರೆ ಬೇರೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ನಿಷೇಧಿಸಲ್ಪಟ್ಟ ಪ್ರಾಣಿಗಳ ಹೆಸರಿನಲ್ಲಿ ಕೋಣಗಳ ಹೆಸರು ಇರುವುದಿಲ್ಲ.
ಕಳೆದ ವರ್ಷ ಕರ್ನಾಟಕ ಸರಕಾರ ಕಂಬಳಕ್ಕೆ ಷರತ್ತುಬದ್ಧ ಅನುಮತಿ ನೀಡಿತು. ಅದನ್ನು ಚಾಚು ತಪ್ಪದೇ ಪಾಲಿಸಿ ಕಂಬಳ ಆಯೋಜನೆ ನಡೆಸಿತ್ತು. ಪಶುಪಾಲನಾ ಸಹಾಯಕ ಆಯುಕ್ತರು ಪ್ರಾಣಿ ದಯಾ ಮಂಡಳಿಯ ಮನವಿಗೆ ಸ್ಪಂದಿಸಿ ಆದೇಶವನ್ನು ಹಿಂಪಡೆದಿತ್ತು. ನ.22ರಂದು ಹೈಕೋರ್ಟ್‍ನಲ್ಲಿ ಸರಕಾರದ ಪರ ವಕೀಲರು ಇದನ್ನು ಸ್ಪಷ್ಟ ಪಡಿಸಿದರು. ಈ ಮೂಲಕ ಹೈಕೋರ್ಟ್ ಕಂಬಳ ಆಚರಣೆಯನ್ನು ನಡೆಸದಂತೆ ಆದೇಶ ನೀಡಿತ್ತು.
ಧಾರ್ಮಿಕ ಆಚರಣೆ ಜಾನಪದ ಕಂಬಳ:
1.ಎತ್ತು ಮತ್ತು ಕೋಣಗಳು ಬೇರೆ ಬೇರೆ ವರ್ಗಕ್ಕೆ ಸೇರಿದ ಪ್ರಾಣಿಗಳು
2.ಕೇಂದ್ರ ಅರಣ್ಯ ಇಲಾಖೆ ಹೆಸರಿರುವ ನಿಷೇಧಿತ ಪಟ್ಟಿಯಲ್ಲಿ ಕೋಣಗಳ ಹೆಸರು ಇರುವುದಿಲ್ಲ.
3.ಕರ್ನಾಟಕ ಸರಕಾರ ವಿಧಿಸಿದ ಷರತ್ತುಗಳನ್ನು ಚಾಚು ತಪ್ಪದೇ ಪಾಲಿಸಿದರೂ ಆದೇಶ ಹಿಂಪಡೆದಿರುವುದು ವಿಪರ್ಯಾಸ. ಸರಕಾರ ಈ ಬಗ್ಗೆ ತಜ್ಞರ ವರದಿಯನ್ನು ಪರಿಶೀಲಿಸಿ ನಮಗೆ ಆದೇಶ ನೀಡಿತ್ತು. ಅದಕ್ಕೂ ಮಾನ್ಯತೆ ಸಿಗಲಿಲ್ಲ.
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಕೃಷಿ ಇಲಾಖೆ, ಪಶುವೈದ್ಯಕೀಯ ಇಲಾಖೆ, ಕ್ರೀಡಾ ಇಲಾಖೆ, ಜಾನಪದ ಸಂಸ್ಕøತಿ ಇಲಾಖೆ ತಜ್ಞರ ಸಮಿತಿಯೊಂದನ್ನು ರಚಿಸಿ ಕಂಬಳ ಆಚರಣೆಗೆ ಅನುವು ಮಾಡಿಕೊಡುವುದಾಗಿ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾಯದರ್ಶಿ ಎನ್. ವಿಜಯಕುಮಾರ್, ಸಚಿನ್ ಅಡಪ, ಹರ್ಷವರ್ಧನ್ ಪಡಿವಾಳ್, ನವೀನ್ ಚಂದ್ರ ಆಳ್ವ, ಪಿ ಆರ್ ಶೆಟ್ಟಿ ಕೂಳೂರು ಪೊಯ್ಯೆಲ್, ಸತೀಶ್ಚಂದ್ರ ಇರುವೈಲ್ ಪಾಣಿಲ ಇವರುಗಳು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಮೊಹಿಯುದ್ಧೀನ್ ಬಾವಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

