ಕೈಕಂಬ: ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಪ್ರತಿಯೊಂದು ವಿಷಯವನ್ನು ತಿಳಿದುಕೊಂಡಾಗ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ, ಅದಕ್ಕಾಗಿ ತರಬೇತಿಗಳು ಅಗತ್ಯ ಎಂದು ತೆಂಕಬೆಳ್ಳೂರು ವಿಧ್ಯಾಭಟ್ ಹೇಳಿದರು.

ಅವರು ಕೈಕಂಬ ದಿಶಾ ಟ್ರಸ್ಟ್ ನಲ್ಲಿ ನಡೆದ ಅಸಂಘಟಿತ ಕಾರ್ಮಿಕರಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಗಾರದಲ್ಲಿ ವಿವಿಧ ರೀತಿಯ ಕರಕುಶಲ ವಸ್ತುಗಳ ತಯಾರಿ ತರಬೇತಿ ನೀಡುತ್ತಾ ಮಾತನಾಡುತ್ತಿದ್ದರು.

ಕೇಂದ್ರ ಸರಕಾರದ ಕಾರ್ಮಿಕ ಶಿಕ್ಷಣ ಇಲಾಖೆ ಮತ್ತು ದಿಶಾ ಟ್ರಸ್ಟ್ ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಗಾರದ ಸಭಾ ಅಧ್ಯಕ್ಷತೆಯನ್ನು ದಿಶಾ ಟ್ರಸ್ಟ್ ನ ನಿರ್ದೇಶಕ ಸಿಲ್ವೆಸ್ಟರ್ ಡಿ ಸೋಜ ವಹಿಸಿದ್ದರು. ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಕಾರ್ಯಗಾರ ಉದ್ಘಾಟಿಸಿದರು. ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ ಕೈಕಂಬ ಇದರ ಅಧ್ಯಕ್ಷ ಅನುಸೂಯ ಕಾಜವ, ದಿಶಾ ಟ್ರಸ್ಟ್ ನ ಸಂಯೋಜಕ ಹೆನ್ರಿ ವಾಲ್ಡರ್ ಉಪಸ್ಥಿತರಿದ್ದರು. ದಿಶಾ ಸಂಸ್ಥೆಯ ಕಾರ್ಯಕರ್ತರಾದ ವಿನೋದ ಕಾರ್ಯಕ್ರಮ ನಿರೂಪಿಸಿ, ರಂಜಿನಿ ಸ್ವಾಗತಿಸಿ, ಸುಮಂಗಲ ವಂದಿಸಿದರು.
