ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸಂವಿಧಾನ ದಿನವನ್ನು” ಆಚರಿಸಲಾಯಿತು. ಸಮಾಜ ವಿಜ್ಞಾನಿ ಶಿಕ್ಷಕಿ ಗೀತಾ ಸಂವಿಧಾನ ದಿನಾಚರಣೆಯ ಮಹತ್ವದ ಕುರಿತು ಮಾಹಿತಿ ನಿಡಿದರು.
ವಿದ್ಯಾರ್ಥಿಗಳು ನಿರೂಪಣೆಯ ಮೂಲಕ ಮತ್ತು ಪ್ಲಕಾರ್ಡನ್ನು ಪ್ರದರ್ಶಿಸುವ ಚಟುವಟಿಕೆಗಳ ಮೂಲಕ ಸಂವಿಧಾನವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವುದಾಗಿ ಪ್ರಮಾಣ ಮಾಡಿದರು.
ಮುಖ್ಯ ಶಿಕ್ಷಕ ಮಹದೇವ್ ಶೆಟ್ಟಿ ಸಂವಿಧಾನವನ್ನು ಪ್ರದರ್ಶಿಸಿ ಅದರ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ” ನನ್ನ ದೈನಂದಿನ ಜೀವನದಲ್ಲಿ ನನ್ನ ಸಂವಿಧಾನ” ವಿಷಯದ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು. ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

