ಕೈಕಂಬ: ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇದರ ಕೆ.ಕೆ.ಎಸ್ ಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಬಿ.ಸಿ. ರೋಡಿನ ಸಂಸಾರ ಜೋಡುಮಾರ್ಗ ತಂಡದಿಂದ ಮಕ್ಕಳ ಹಕ್ಕುಗಳ ಬಗ್ಗೆ ಕಿರು ನಾಟಕವನ್ನು ಬೊಳಿಯ ಹಾಗೂ ಕಲ್ಲಾಡಿ ಶಾಲೆಯಲ್ಲಿ ಪ್ರದರ್ಶಿಸಲಾಯಿತು.
ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಹತ್ತು 10 ಶಾಲೆಗಳಲ್ಲಿ ನಾಟಕ ಪ್ರದರ್ಶಿಸುತ್ತಿದೆ. ಪ್ರಜ್ಞಾ ಸಲಹಾ ಕೇಂದ್ರದ ಕೆ.ಕೆ.ಎಸ್ ಯೋಜನೆ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ಅವರು ಜಾಥಾದ ನೇತೃತ್ವ ವಹಿಸಿದ್ದು, ಅಯಾ ವಲಯಗಳ ಕಾರ್ಯಕರ್ತರು, ಶಾಲಾ ಶಿಕ್ಷಕ ವೃಂದದವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವುದು, ಬಾಲಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ತಪ್ಪು ಎಂಬುದನ್ನು ಸಾರಿ ಹೇಳುವುದರ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬುದನ್ನು ನಾಟಕ ಮನನ ಮಾಡಿಕೊಡುತ್ತದೆ.
ಸಂಸಾರ ತಂಡದ ನಿರ್ದೇಶಕ ಮಾನೇಶ್ ವಿಶ್ವಕರ್ಮ, ಕಲಾವಿದರಾದ ಪೃಥ್ವಿರಾಜ್, ವರದರಾಜ್, ಕೃತೇಶ್, ಲಾವಣ್ಯ, ಸ್ವಾತಿ ತಂಡದಲ್ಲಿದ್ದರು. ಕಲ್ಲಾಡಿ ಹಾಗೂ ಬೊಳಿಯ ಶಾಲೆಗಳಲ್ಲಿ ನಡೆದ ನಾಟಕ ಪ್ರದರ್ಶನದ ವೇಳೆ ಕೈಕಂಬ ವಲಯ ಕಾರ್ಯಕರ್ತರಾದ ಈಶ್ವರ್, ಪಾಲಕ್ಷೀ, ಸೀತಾಲಕ್ಷ್ಮೀ ಉಪಸ್ಥಿತರಿದ್ದರು.


