friendship1
ಓ ಸ್ನೇಹವೇ ನೀನೆಷ್ಟು ನೀಡುವೆ ಪ್ರೀತಿ
ನಿನ್ನ ಪ್ರೀತಿಗೆ ಹೆಚ್ಚಾಯ್ತು ನನ್ನ ಕಣ್ಣಿನ ಕಾಂತಿ
ಬಂದೆ ನೀ ನನ್ನ ಮನಕ್ಕಾಗಿ ಅತಿಥಿ
ಬಂದು ಬದಲಾಯಿಸಿದೆ ನನ್ನ ಮನದ ರೀತಿ
ಹಂಚಿಕೊಂಡು ಬಾಳುವ ನನ್ನ ಅದ್ಭುತ ಗಳಿಗೆ
ನೀಡುವೆನು ಸ್ನೇಹದಲ್ಲಿ ಎಲ್ಲರಿಗೂ ಸಲಿಗೆ
ಒಬ್ಬರನೊಬ್ಬರು ಬಿಟ್ಟು ಬಾರದ ಎಲ್ಲಾ ದಿನ
ಇದಕ್ಕೆ ಮರುಳಾಗುವುದು ಎಲ್ಲರ ಮನ
ಅತ್ತಾಗ ಕಣ್ಣೊರೆಸುವ ಸ್ನೇಹದ ಕೈ
ಇದ ಕಂಡಾಗ ಜಲ್ಲೆನಿಸಿತು ನನ್ನ ಮೈ
ಮುಖದಲ್ಲಿರುವುದು ಎಷ್ಟು ಹೊತ್ತಿಗೂ ನಗೆ
ಇದ ಕಂಡು ಕಡಿಮೆಯಾಗುವುದು ಮನದ ದಗೆ
ಬಿಟ್ಟು ಹೊಗದಿರು ಸ್ನೇಹವೇ ನೀ ನನ್ನ
ಕೈ ನಡೆಸು ಸೋಲಿನಲಿ ಎನ್ನ

By suddi9

Leave a Reply

Your email address will not be published. Required fields are marked *