ಎಲ್ಲರೂ ಮಾಡುವ ಸಾಮಾನ್ಯ ಬೇಡಿಕೆಯಂತೆ ನಾನು ಸರ್ಕಾರಕ್ಕೆ ಅಕ್ಕಿ, ಡೀಸೆಲ್ ತರಕಾರಿ ಬೆಲೆಗಳನ್ನು ಕಡಿಮೆ ಮಾಡಿ, ಅಥವಾ ಸರಕಾರಿ ಉದ್ಯೋಗಿಗಳು ನಮ್ಮ ಸಂಬಳ ಹೆಚ್ಚು ಮಾಡಿ ಮತ್ತು ಇನ್ನು ಇತರ ಬೇಡಿಕೆಗಳಂತೆ ನಾನು ಮಾಡುತ್ತಿಲ್ಲ.

law1

ನನ್ನ ಬೇಡಿಕೆ ಏನೆಂದರೆ, ನನಗೆ ವಿಜ್ಞಾನಿಯಾಗಲು ಬಹಳ ಇಷ್ಟ. ಅದೇ ರೀತಿ ನಮ್ಮ ದೇಶವನ್ನು ಮುಂದೆ ತರಲು ಬಹಳ ಇಷ್ಟ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಅತ್ಯಾಚಾರ ಆರೋಪ, ಕೊಲೆ, ದರೋಡೆ ಮತ್ತು ಬೇರೆ ಬೇರೆ ಅನ್ಯಚಟುವಟಿಕೆಗಳು ಹೆಚ್ಚಾಗುತ್ತದೆ. ಇಂತಹ ಆರೋಪಿಗಳನ್ನು ನಮ್ಮ ದೇಶದ ನ್ಯಾಯಲಯ ಮತ್ತು ಪೊಲೀಸ್ ಠಾಣೆಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುವುದನ್ನು ಬಿಟ್ಟು ಅವರಿಗೆ ಜೀವವಾದಿ ಶಿಕ್ಷೆಯನ್ನೋ ಅಥವಾ 10 ವರ್ಷಗಳ ಕಾಲವೋ ಇಲ್ಲ ಹಣದ ರೂಪದಲ್ಲಿ ದಂಡವನ್ನು ಕಟ್ಟಿಸಿಕೊಳ್ಳುತ್ತಾರೆ.

ಇದರಿಂದ ಆರೋಪಿಗಳು ಹೆಚ್ಚಾಗುತ್ತಾರೆ ಹೊರತು ಕಡಿಮೆಯಾಗುವುದಿಲ್ಲ. ನಾನು ಆಗಲೇ ಹೇಳಿದ್ದೇನಲ್ಲ ನಮ್ಮ ದೇಶದಲ್ಲಿ ಅತ್ಯಚಾರಿಗಳು ಹೆಚ್ಚಾಗಿದ್ದಾರೆ ಅಂತ, ಇಂತವರಿಂದ ಹಲವಾರು ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೊರಗಡೆ ಕಲಿಸುವುದಕ್ಕೆ ಹೆದರುವ ಪರಿಸ್ಥಿತಿ ಬಂದಿದೆ. ಆರೋಪಿಗಳು ಆರಾಮವಾಗಿ ತಮ್ಮ ಜೀವನವನ್ನು ಜೈಲಿನಲ್ಲಿ ಊಟ ಮಾಡುತ್ತ, ಕೆಲಸ ಮಾಡುತ್ತ ಕಳೆದು ಬಿಡುತ್ತಾರೆ. ಆದರೆ ಅವರು ಅತ್ಯಚಾರ ಮಾಡಿ ಕೊಲೆ ಮಾಡಿದ ಹುಡುಗಿ ಮತ್ತು ಅವರ  ಮನೆಯವರ ಪರಿಸ್ಥಿತಿ ಯಾರೂ ಕೇಳೂವವರಿಲ್ಲ. ಅತ್ಯಾಚಾರ ಮಾಡಿದವನು ಶ್ರೀಮಂತನಾಗಿದ್ದು ಆ ಹುಡುಗಿಯು ಬಡವಿಯಾಗಿದ್ದರೆ ಈ ಕೆಟ್ಟ ಸಮಾಜ ಪಾಪ ಆ ಹೆಣ್ಣು ಮಗುವನ್ನೇ ನಿಂದಿಸುತ್ತದೆ. ಆ ವ್ಯಕ್ತಿ ಜೈಲಿಗೆ ಹೋಗಿ ಬಂದಿದ್ದರು ಅವನಿಗೆ ಗೌರವ ಕೊಡುತ್ತಾರೆ.

ನಮ್ಮ ಸರಕಾರವು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆಯನ್ನು ಕೊಡುವುದೇ ಇಲ್ಲ. ಉದಾಹರಣೆಗೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಅತ್ಯಾಚಾರದ ಘಟನೆಯನ್ನು ನೆನಪಿಸಿಕೊಳ್ಳಿ. ಆ ಹುಡುಗಿ ಆ ದುಷ್ಟ ಆರು ಜನರಿಂದ ತೊಂದರೆಗೊಳಗಾಗಿ ತನ್ನ ಪ್ರಾಣವನ್ನೇ ಬಿಟ್ಟಳು. ಎಷ್ಟು ಹಿಂಸೆಕೊಟ್ಟರು. ಆದರೆ ನಮ್ಮ ಸರಕಾರ ಆ ಆರು ದುಷ್ಟರಿಗೆ ಗಲ್ಲು ಶಿಕ್ಷೆ ಕೊಟ್ಟಿತು. ಇದರಿಂದ ಅವರಿಗೇನು ಹಿಂಸೆಯು ಆಗಲಿಲ್ಲ. ಇದನ್ನೆಲ್ಲ ನೋಡಿ ನನಗೊಂದು ಉಪಾಯ ಬಂದಿದೆ. ನಾನು ವಿಜ್ಞಾನ ವಿಷಯದ ವಿದ್ಯಾರ್ಥಿನಿ, ನಮ್ಮ ದೇಹದ ಎಲ್ಲ ಭಾಗಗಳು ಬದುಕಿರುವಾಗ ಬೇರೆಯವರಿಗೆ ಕೊಟ್ಟರೆ ಅದು ಉಪಯೋಗವಾಗುತ್ತದೆ. ಎಂದು ಕೇಳಿಸಿಕೊಂಡಿದ್ದೇನೆ.

ನಮ್ಮ ದೇಶದಲ್ಲಿ ಎಷ್ಟೋ ಅಂಗವಿಕಲರು, ಕುರುಡರು ರಕ್ತ ಹೀನರು ಇನ್ನೂ ಮುಂತಾದವರು ಇದ್ದಾರೆ. ಇವರಿಗೆ ಬದುಕಿರುವಾಗಲೇ ಯಾರೂ ಅವರಂಗಗಳನ್ನು ದಾನ ಮಾಡುವುದಿಲ್ಲ. ಅದಕ್ಕೆ ಹೇಗಿದ್ದರೂ ನಮ್ಮ ಸರಕಾರ ಅತ್ಯಚಾರಿಗಳನ್ನು ಸುಮ್ಮನೆ ಏನೂ ನೋವು ಕೊಡದೆ ಗಲ್ಲಿಗೆ ಹಾಕುವ ಬದಲು ಅವರ ದೇಹದಲ್ಲಿರುವ ಉಪಯೋಗಕ್ಕೆ ಬರುವ ಅಂಗಗಳನ್ನು ತೆಗೆದುಕೊಂಡು ಅವರನ್ನೂ ಬದುಕಲು ಬಿಡಬೇಕು.

ಅವರು ಬದುಕುವವರೆಗೂ ನೋವಿನಿಂದ ನರಲಿ ಸಾಯಬೇಕು. ಇವರ ಈ ಶಿಕ್ಷೆಯನ್ನು ನೋಡಿದ ಬೇರೆ ಯಾವ ಜನರು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಹಾಗೇ ಹೀಗೆ ಮಾಡುವುದರಿಂದ ಎಷ್ಟೋ ಜನರ ಪ್ರಾಣ ಉಳಿಯುತ್ತದೆ. ನಮ್ಮ ದೇಶವು ಪ್ರಗತಿಯ ಕಡೆಗೆ ಹೋಗುತ್ತದೆ.

ನನ್ನ ಈ ಅನಿಸಿಕೆ ನಿಮಗೆ ತಪ್ಪು ಕಾಣಿಸಿದ್ದಲ್ಲಿ ಕ್ಷಮಿಸಿ, ಇಷ್ಟವಾದಲ್ಲಿ ಎಲ್ಲರೂ ಸೇರಿ ಪ್ರತಿಭಟಿಸಿ ಈ ಕಾನೂನು ಜಾರಿಗೆ ತರೋಣ ಒಬ್ಬ ಆರೋಪಿಯಿಂದ ಹತ್ತಾರು ಅಂಗವಿಕಲರು ಸರಿಯಾಗುವುದಾದರೆ ಈ ಕಾನೂನು ಏಕೆ ಜಾರಿಗೆ ತರಬಾರದು? ನೋಡಿ ನೀವೆ ಯೋಚಿಸಿ..

-ರಚನಾ.ಕೆ.ಎನ್

By suddi9

Leave a Reply

Your email address will not be published. Required fields are marked *