ಮೂಡುಬಿದಿರೆ: ದಿನವಿಡೀ ಸಾಹಿತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಿದ ವಿದ್ಯಾಗಿರಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನ್ನನು ತೆರೆದುಕೊಂಡಿತು.ನಾಡಿನ ಕಲಾವಿದರು ಹಾಡು-ನೃತ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

alvas1

nudisiri-manasa-1

nudisiri-manasa5

ರತ್ನಾಕರವರ್ಣಿ ವೇದಿಕೆಯಲ್ಲಿ ಬೆಂಗಳೂರಿನ ಪೂರ್ಣಿಮಾ ಭಟ್ ಕುಲಕರ್ಣಿ ಹಾಗೂ ಭಾರತಿ ಪ್ರತಾಪ್ ತಂಡದಿಂದ ಹಿಂದೂಸ್ತಾನಿ ಜುಗಲ್‍ಬಂದಿ ಗಾಯನ, ಮಂಜೇಶ್ವರದ ನಾಟ್ಯನಿಲಯಂನಿಂದ ನೃತ್ಯಾಕರ್ಷಣಂ ಕಾರ್ಯಕ್ರಮ ರಸಿಕರ ಮನಸೆಳೆದವು. ಕರ್ನಾಟಕದೆಲ್ಲೆಡೆ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ದೂರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ 2 ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿತು.

2

nudisiri-manasa-8

ಮೂಡುಬಿದಿರೆ ಬೆದ್ರ ಫ್ರೆಂಡ್ಸ್‍ನ ಹುಲಿವೇಷ ಕುಣಿತ, ತುಮಕೂರು ಕೀರ್ತನಾ ರಂಗಬಳಗದ ರಂಗಗೀತೆ, ರಮೇಶ್ಚಂದ್ರ ಸಂಯೋಜನೆಯಲ್ಲಿ ಮೂಡಿಬಂದ ಟಿ.ವಿ. ವಾಹಿನಿ ರಿಯಾಲಿಟಿ ಶೋ ವಿಜೇತ ಬಾಲಪ್ರತಿಭೆಗಳಿಂದ ಸಂಗೀತ ರಸದೌತಣ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ವೀಕ್ಷಕರ ಗಮನ ಸೆಳೆದವು.

nudisiri-manasa-9

4

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆಯಲ್ಲಿ ಬಂಟ್ವಾಳ ಹೇಮಂತ್ ಕುಮಾರ್ ಮತ್ತು ತಂಡದ ಸ್ಯಾಕ್ಸೋಫೋನ್ ವಾದನ, ಶಾರ್ವರಿ ಬೆಂಗಳೂರು ಇವರ ಹರಿಕಥಾ ಕೀರ್ತನೆ, ಸ್ನೇಹಾ ನಾರಾಯಣ್ ಬೆಂಗಳೂರು ಇವರ ತತ್ತ್ವಪದ ಹಾಗೂ ಆಶ್ನಿ ಗಿರಿಧರ್ ಮಂಗಳೂರು ಇವರ ನಾಟ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

nudisiri-manasa-10

ಡಾ. ಶಿವರಾಮ ಕಾರಂತ ವೇದಿಕೆಯಲ್ಲಿ ಜಯತೀರ್ಥ ಜೋಷಿ ನಿರ್ದೇಶನದ, ಗಿರೀಶ್ ಕಾರ್ನಾಡ್ ರಚನೆಯ, ರಂಗಾಯಣ ಮೈಸೂರು ಅಭಿನಯದ ‘ತಲೆದಂಡ’ ನಾಟಕ ಪ್ರದರ್ಶಿಸಲ್ಪಟ್ಟು ಸಾವಿರಾರು ನಾಟಕ ರಸಿಕರ ಮನ ತುಂಬಿದವು. ಮಿಜಾರು ಅಣ್ಣಪ್ಪ ವೇದಿಕೆಯಲ್ಲಿ ಯಕ್ಷ- ಗಾಯನ-ವಾದನ ವೈವಿಧ್ಯ ತೆಂಕುತಿಟ್ಟು ಯಕ್ಷಗಾನ ಹಾಗೂ ದೇವಾನಂದ್ ಭಟ್ ಬೆಳುವಾಯಿ ಸಂಯೋಜನೆಯಲ್ಲಿ ಯಕ್ಷಗಾನ ಬಣ್ಣದ ಲೋಕದ ಅನಾವರಣ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆದವು.

nudisiri-manasa-13

ಬೋಲ ಚಿತ್ತರಂಜನ್ ಶೆಟ್ಟಿ ವೇದಿಕೆಯಲ್ಲಿ ಉಡುಪಿ ಕಲಾವತಿ ದಯಾನಂದ ಮತ್ತು ತಂಡ ಸಂಗೀತ ಸೌರಭ, ಉಮೇಶ್ ಮಿಜಾರು ಅವರ ನಮ್ಮ ಕಲಾವಿದರ್ ಬೆದ್ರ ತಂಡ, ಮೂಡುಬಿದಿರೆ ಇವರಿಂದ ತೆಲಿಕದ ಗೊಂಚಿಲು ಕಾರ್ಯಕ್ರಮ ಹಾಗೂ ಕೂಡ್ಲಿಗಿ ಕೊಟ್ರೇಶಿ ಮತ್ತು ತಂಡದ ಹಾಸ್ಯೋಲ್ಲಾಸ ಜನರ ಮನಸ್ಸಿಗೆ ಮುದನೀಡಿತು.

3

nudisiri-manasa-14

ಡಾ. ವಿ.ಎಸ್. ಆಚಾರ್ಯ ಸಭಾಭವನದ ಸುಭಾಶ್ಚಂದ್ರ ಪಡಿವಾಳ್ ವೇದಿಕೆಯಲ್ಲಿ ಡಾ. ಸುಪರ್ಣ ರವಿಶಂಕರ್ ಹಾಗೂ ಬಳಗ ಬೆಂಗಳೂರು ಇವರಿಂದ ವೀಣಾ ವಾದನ, ಅನಘ ಭಟ್ ಮತ್ತು ತಂಡ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ದರ್ಶನ್ ಬೆಂಗಳೂರ್ ಅವರಿಂದ ಭರತನಾಟ್ಯ, ಗದಗದ ನಾರಾಯಣ ಹಿರೇಕೊಳಚಿ ಮತ್ತು ತಂಡದ ವಯೋಲಿನ್ ವಾದನ, ಅಂಜಲಿ ನಾಗಭೂಷಣ್ ದುಬೈ ಇವರ ಭರತನಾಟ್ಯ, ಮಂಗಳೂರಿನ ವಿದುಷಿ ಅನು ಮತ್ತು ಭವ ಸಂಕಕುಮಾರ್ ಸಹೋದರಿಯರ ನೃತ್ಯಾನುಭವ ಕಾರ್ಯಕ್ರಮ, ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಬಳಗದ ಹರಿಕಥಾ ಕೀರ್ತನ, ರಾಜಶ್ರೀ ಹೊಳ್ಳ ಬೆಂಗಳೂರು ಇವರ ಕೂಚುಪುಡಿ ನೃತ್ಯ, ಮೌನೇಶ್ ಕುಮಾರ್ ಛಾವಣಿ ಹಾಗೂ ಬಳಗದ ಭಕ್ತಿಗೀತೆಗಳು, ಬೆಂಗಳೂರಿನ ಅಪ್ಪಗೆರೆ ತಿಮ್ಮರಾಜು ಹಾಗೂ ಬಳಗದ ಜನಪದ ಹಾಡುಗಳು, ನಿರೂಪಮಾ ಮತ್ತು ರಾಜೇಂದ್ರ ಬೆಂಗಳೂರು ಇವರಿಂದ ಯುಗಳ ಕಥಕ್‍ನೃತ್ಯ, ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದ ಭರತಾಂಜಲಿ ಮಂಗಳೂರು ಇವರ ನೃತ್ಯಾಮೃತಂ ಕಾರ್ಯಕ್ರಮಗಳು ಮನಸೆಳೆದವು.

nudisiri-manasa3

ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆ ಮಣಿಪಾಲ ಇವರಿಂದ ಮೇಘದೂತ- ನೃತ್ಯರೂಪಕ ಹಾಗೂ ನೃತ್ಯ ನಿಕೇತನ ಉಡುಪಿ ತಂಡದಿಂದ ವಿದುಷಿ ಲಕ್ಷ್ಮಿ ಗುರುರಾಜ್ ನಿರ್ದೇಶನದ ನೃತ್ಯಾರ್ಪಣಂ ವೈವಿಧ್ಯಮಯವಾದ ಸಾಂಸ್ಕೃತಿಕ ಸಂಜೆಗೆ ವಿಶೇಷವಾದ ಮೆರುಗು ನೀಡಿದವು.

nudisiri-manasa4

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ವಿರಾಟ ಪರ್ವ ಶ್ರೀ ಮಂಜುನಾಥೇಶ್ವರ ತೊಗಲುಗೊಂಬೆ ಕಲಾ ತಂಡ ಕೊಪ್ಪಳ ಇವರಿಂದ ತೊಗಲು ಗೊಂಬೆಯಾಟ ನಡೆಯಿತು. ಒಟ್ಟಿನಲ್ಲಿ ಆಳ್ವಾಸ್ ನುಡಿಸಿರಿ ಎಂದಿನಂತೆ ಸಾಂಸ್ಕೃತಿಕ ಕಲಾ ವೈಭವದ ಅನಾವರಣ ಮಾಡಿಕೊಂಡು ಸಾವಿರಾರು ಜನರನ್ನು ಸೆಳೆಯುವಲ್ಲಿ ಸಫಲವಾಗಿದೆ.

By Suddi9

Leave a Reply

Your email address will not be published. Required fields are marked *