ಮೂಡುಬಿದಿರೆ: ಹೆಚ್ಚಿನ ಶಿಕ್ಷಣದಿಂದ ವಂಚಿತಳಾದರೂ, ರಂಗಭೂಮಿಯ ಮೂಲಕ ಹೆಚ್ಚಿನ ಲೋಕಜ್ಞಾನವನ್ನು ಪಡೆದಿದ್ದೇನೆ. ಹೆಚ್ಚಿನವರಿಗೆ ಕನಸ್ಸಿನಲ್ಲೂ ಸಿಗದ ವಾತಾವರಣ, ಸನ್ನಿವೇಶ, ವಿಷಯಗಳ ನನಗೆ ರಂಗಭೂಮಿಯಿಂದ ಸಿಕ್ಕಿದೆ. ರಂಗಭೂಮಿ ನನ್ನ ಬದುಕಿನ ಮನೆಯಾಗಿದೆ. ಇದು ನುಡಿಸಿರಿಯ ಮೊದಲ ದಿನ, ಈ ಬಾರಿಗೆ ಮೊದಲ `ನಮ್ಮಕತೆ ನಿಮ್ಮ ಜೊತೆ‘ ಎನ್ನುವ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಡಾ.ಬಿ.ಜಯಶ್ರೀ ನುಡಿದ ಮನದಾಳದ ಮಾತು.

jaya-1

ನಮ್ಮ ಕಂಪನಿ ನಾಟಕವಾಡುವ ಸಂದರ್ಭದಲ್ಲಿ ಮೊದಲು ಮೈಕ್, ಲೈಟ್‍ನಂತಹ ವ್ಯವಸ್ಥೆಯಿರಲಿಲ್ಲ. ನಾವು ಸಂಭಾಷಣೆ ಮಾಡುವಾಗ ಏರು ಧ್ವನಿಯೇ ಮುಖ್ಯವಾಗುತ್ತಿತ್ತು. ನಮಗೆ ಆಗ ಪಾಸ್ ಪಡೆದು, ಯಾವುದೇ ಕಷ್ಟಪಡದೆ ಬಂದ ಎದುರಿನ ಸಾಲಿನ ಪ್ರೇಕ್ಷಕರಿಗಿಂತ ಟಿಕೆಟ್ ಪಡೆದು, ಕಷ್ಟಪಟ್ಟು ಬರುವ ಹಿಂದಿನ ಪ್ರೇಕ್ಷಕರನ್ನು ತಲುಪುವುದು ಮುಖ್ಯವಾಗಿತ್ತು. ಗುಬ್ಬಿ ಕಂಪೆನಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುತ್ತಿದ್ದರು. ಅಲ್ಲಿ ಸ್ವತಂತ್ರವಿತ್ತು. ಆದರೆ ಸ್ವೇಚ್ಛೆಗೆ ಅವಕಾಶವಿರಲಿಲ್ಲ. ಕೀಳುಮಟ್ಟದ ಸಂಭಾಷಣೆ, ಅಶ್ಲೀಲ ವಾಕ್ಯ ಬಳಕೆ, ಅಶ್ಲೀಲವಾದ ನಡವಳಿಕೆ ಕಂಪೆನಿ ನಾಟಕಗಳಲ್ಲಿ ನಡೀತಾ ಇರಲಿಲ್ಲ, ನಡೆದಿಲ್ಲ. ಹಾಡು ಮಾತಾಗಬೇಕು, ಮಾತು ಹಾಡಬೇಕು ಎನ್ನುವ ಬಿ.ವಿ ಕಾರಂತರ ವಿಚಾರಧಾರೆ ನಾನು ಮೆಚ್ಚಿರುವಂತದ್ದು. ನನಗನ್ನಿಸಿದ ಹಾಗೆ ರಂಗ ಸಂಗೀತದಲ್ಲಿ ಕಾಣಸಿಗುವ ವೈವಿಧ್ಯತೆ ಬೇರೆ ಯಾವುದೇ ಸಂಗೀತ ಪ್ರಕಾರಗಳಲ್ಲಿ ಕಾಣಸಿಗಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

jaya-2

ಕಾರ್ಯಕ್ರಮದ ಸಮನ್ವಯಕರು ನಾಟಕವೊಂದರ ಸಂಭಾಷಣೆಯನ್ನು ಹೇಳುವಂತೆ ಕೋರಿಕೆಯನ್ನಿಟ್ಟಾಗ, ` ನಾಟಕದ ಪಾತ್ರವಾಗುವ ಸಂದರ್ಭ ನಾನು ಆ ಪಾತ್ರವಾಗಿ ಸಂಭಾಷಣೆ ಮಾಡುತ್ತೇನೆ. ಈ ಸಂದರ್ಭದಲ್ಲಿ ಅದಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ ಎಂದು ರಂಗಗೀತೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಜಯಶ್ರೀಯವರ ಮಾತುಕತೆ ಕಾರ್ಯಕ್ರಮಕ್ಕೆ ಸಭಾಂಗಣ ಪ್ರೇಕ್ಷಕರಿಂದ `ಹೌಸ್‍ಫುಲ್’ ಆಗಿ ಕಂಡುಬಂತು.
ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಬಿ.ಎನ್ ಸುಮಿತ್ರಾ ಬಾಯಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಡಾ.ನಾ.ದಾ ಶೆಟ್ಟಿ ಉಪಸ್ಥಿತರಿದ್ದರು. ರಾಮ ಪ್ರಸಾದ್ ಕಾಂಚೋಡು ಉಪಸ್ಥಿತರಿದ್ದರು.

ಹವ್ಯಾಸ-ವೃತ್ತಿ ನಾಟಕದ ಸೇತುವೆ:
ವೃತ್ತಿ ನಾಟಕಗಳು ಹಾಗೂ ಹಾವ್ಯಸಿ ನಾಟಕಗಳ ನಡುವೆ ನಾನು ಸೇತುವೆಯಾಗಲು ಬಯಸುವೆ. ಕಂಪೆನಿಯ ನಾಟಕಗಳ ಟೆಕ್ನಿಕ್‍ಗಳಲ್ಲಿರದಿರುವುದನ್ನು ಅರಿತು, ಅದನ್ನು ಅಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇನೆ.

By Suddi9

Leave a Reply

Your email address will not be published. Required fields are marked *