ಮೂಡುಬಿದಿರೆ: ಕಳೆದ ಎರಡು ದಿನಗಳಿಂದ ಹಬ್ಬದ ವಾತಾವರಣವಿರುವ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶನಿವಾರ ನುಡಿಸಿರಿಗೆ ವಿಶೇಷ ಆಕರ್ಷಣೆ ನೀಡಿದ್ದು ಶ್ವಾನ ಪ್ರದರ್ಶನ.
ಶ್ವಾನದ ಬೆಸ್ಟ್ ಸ್ಟಾಂಡ್, ಆರೋಗ್ಯ, ಪ್ರದರ್ಶನ ಶೈಲಿಯನ್ನು ಪರಿಗಣಿಸಿ, ಮರಿನಾಯಿ(1 ವರ್ಷ ಒಳಗಿನ) ಹಾಗೂ ಹಿರಿನಾಯಿ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಯಿತು. ಮರಿ ವಿಭಾಗದಲ್ಲಿ 15, ಹಿರಿ ವಿಭಾಗದಲ್ಲಿ 17 ನಾಯಿಗಳು ಭಾಗವಹಿಸಿದವು.


ಮರಿ ವಿಭಾಗದಲ್ಲಿ ಗೆದ್ದವರು: 1.ಜರ್ಮನ್ ಶೆಫರ್ಡ್ (ಯಾಜಮಾನ: ಅನ್ಮಿರ್ ಮೂಲ್ಕಿ), 2.ಅಕಿಠಾ (ಪುನೀತ್ ಕಾಸರಗೋಡು), 3.ಬಾಕ್ಸರ್(ಕಾರ್ತಿಕ್). ಸ್ವಿಡ್ಜ್(ಜಾನ್ಸಿ) ಆಕರ್ಷಕ ಬಹುಮಾನ ಪಡೆದರು.

ಹಿರಿವಿಭಾಗದಲ್ಲಿ ಗೆದ್ದವರು: 1.ಕರವನ್ ಹೌನ್(ರಾಜೇಶ್ ಪೂಜಾರಿ ಉಡುಪಿ),2. ಲ್ಯಾಬ್ರ ಡಾಲ್(ಪುನೀತ್ ಕಾಸರಗೋಡು), 3.ಮುದೋಳ(ದಯಾನಂದ ಶೆಟ್ಟಿ ಕಿನ್ನಿಗೋಳಿ ಐಕಳ ತೃತೀಯ ಹಾಗೂ ಆಕರ್ಷಕ ಪ್ರಶಸ್ತಿಯನ್ನು ಪಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪಶುವೈದ್ಯ ಡಾ.ಬಿಜೂರ್, ಡಾ.ಗೋಪಾಲಕೃಷ್ಣ ತೀರ್ಪುಗಾರರಾಗಿದ್ದರು. ಡಾ.ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.



