ಮೂಡುಬಿದಿರೆ: ಆಕಾಶವಾಣಿ ಮಂಗಳೂರು ಕೇಂದ್ರವು ಮೂಡುಬಿದಿರೆಯಲ್ಲಿ ನ.18ರಿಂದ 20ರ ತನಕ ನಡೆಯಲಿರುವ ‘ಆಳ್ವಾಸ್ ನುಡಿಸಿರಿ’ 2016 ಕನ್ನಡ ನಾಡು ನುಡಿ ಸಂಸ್ಕೃತಿಯ ರಾಪ್ಟ್ರೀಯ ಸಮ್ಮೇಳನದ ಕಾರ್ಯಕಲಾಪಗಳನ್ನು ನೇರಪ್ರಸಾರ ಮಾಡಲಿದೆ.
ನ.18 ರಂದು ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ಮಧ್ಯಾಹ್ನ 2.35 ರಿಂದ ಸಂಜೆ 6 ಗಂಟೆಯವರೆಗೆ ಉದ್ಘಾಟನೆ ಹಾಗೂ ವಿವಿಧ ಗೋಪ್ಠಿ ಮತ್ತು ವಿವಿಧ ವೇದಿಕೆಗಳ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಲಿದೆ. ನ.19 ರಂದು ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯರವರೆಗೆ, ಮಧ್ಯಾಹ್ನ 2.35 ರಿಂದ ಸಂಜೆ 6 ಗಂಟೆಯವರೆಗೆ ಎರಡನೇ ದಿನದ ಕಲಾಪಗಳನ್ನು ಹಾಗೂ ನ.20 ರಂದು ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯ ವರೆಗೆ, ಮಧ್ಯಾಹ್ನ 2.35 ರಿಂದ ಸಾಯಂಕಾಲ 6 ಗಂಟೆಯ ವರೆಗೆ ಕಾರ್ಯಕಲಾಪಗಳನ್ನು ನೇರಪ್ರಸಾರ ಮಾಡಲಿದೆ. ವಾರ್ತಾ ಪ್ರಸಾರವನ್ನು ಹೊರತುಪಡಿಸಿದಂತೆ ನಿರಂತರವಾಗಿ ಕಾರ್ಯಕ್ರಮ ನೇರಪ್ರಸಾರ ಮಾಡಲಾಗುವುದು.
ಡಾ.ವಸಂತ ಕುಮಾರ್ ಪೆರ್ಲ, ಡಾ.ಸದಾನಂದ ಹೊಳ್ಳ, ಕನ್ಸೆಪ್ಟಾ ಫೆರ್ನಾಂಡೀಸ್, ಪಿ.ಎಸ್. ಸೂರ್ಯನಾರಾಯಣ ಭಟ್, ದೇವು ಹನೇಹಳ್ಳಿ, ನವೀನ್ ಕುಮಾರ್ ಕದ್ರಿ, ಫ್ಲೋರಿನ್ ರೋಚ್, ಡಾ.ಶರಭೇಂದ್ರ ಸ್ವಾಮಿ , ಟಿ.ಎಸ್. ಪ್ರಸಾದ್ ಮತ್ತು ಡಾ.ಸದಾನಂದ ಪೆರ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ. ರತ್ನಾಕರವರ್ಣಿ ವೇದಿಕೆಯ ಮುಂಭಾಗದ ವಿಶೇಷ ಪ್ರಸಾರ ಕೇಂದ್ರದಿಂದ ವೀಕ್ಷಕ ವಿವರಣೆ ಬಿತ್ತರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ್ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

