ಮೂಡುಬಿದಿರೆ: ರೈತರು ಸ್ವಾಭಿಮಾನಿಗಳು. ಜಾಗತಿಕರಣದ ಪರಿಣಾಮದಿಂದ ರೈತರು ಕೃಷಿ ಚಟುವಟಿಕೆಗಳಿಂದ ವಿಮೂಕರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಕಾರಿ ಸಂಘಗಳು ರೈತರಿಗೆ ಬೆಂಗಾವಲಾಗಿ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದು ಅಲಂಗಾರು ಹೋಲಿ ರೋಸರಿ ಚರ್ಚ್‍ನ ಧರ್ಮಗುರು ರೆ.ಫಾ ಬಾಸಿಲ್ ವಾಸ್ ಹೇಳಿದರು.

mcs-bank-1

ಎಂಸಿಎಸ್ ಬ್ಯಾಂಕ್ ವತಿಯಿಂದ ಕಲ್ಪವೃಕ್ಷ ಸಭಾಂಗಣದಲ್ಲಿ ಸಹಕಾರಿ ಸಪ್ತಾಹ ಸಂಭ್ರಮದಂಗವಾಗಿ ನಡೆಯುತ್ತಿರುವ `ಸಪ್ತ ಸಂಧ್ಯಾ‘ ಕಾರ್ಯಕ್ರಮದ ಎರಡನೇ ದಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಅಧ್ಯಕ್ಷ ರಾಜವರ್ಮ ಬೈಲಂಗಡಿ `ಕೃಷಿಯಲ್ಲಿ ಸಹಕಾರಿ ಬದುಕು ಎಂಬ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ನಯನ್ ಕುಮಾರ್, ಸುರೇಂದ್ರ ಕುಮಾರ್ ಹಾಗೂ ಶಾಂತಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಎಮ್. ವಿನಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಂಸಿಎಸ್ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ದರಣೇಂದ್ರ ಜೈನ್, ಯತಿರಾಜ್ , ಹೆರಾಲ್ಡ್ ತಾವ್ರೊ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಾಹುಬಲಿ ಪ್ರಸಾದ್ ವಂದಿಸಿದರು. ಸಪ್ತ ಸಂಧ್ಯಾ 2ನೇ ದಿನದ ಸಾಂಸ್ಕೃತಿಕ ವೈಭವದಲ್ಲಿ ಮೂಡುಬಿದಿರೆಯ ಕೆ.ವಿ.ರಮಣ್ ಬಳಗದಿಂದ ವೈವಿಧ್ಯಮಯ ನೃತ್ಯ ಸಿಂಚನ ನಡೆಯಿತು.

By suddi9

Leave a Reply

Your email address will not be published. Required fields are marked *