ಸುದ್ಬದಿ9 ಕೈಕಂಬ: ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಪ್ರಶಂಸ ಕಾಪು ತಂಡ ಪ್ರಥಮ ಪ್ರಶಸ್ತಿಯೊಂದಿಗೆ ಎರಡು ಲಕ್ಷ ರೂ. ನಗದನ್ನು ಗೆದ್ದುಕೊಂಡಿದೆ.
ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಸನ್ನಿಧಿಯಲ್ಲಿ ನಿನ್ನೆ ನಮ್ಮ ಟಿವಿವಾಹಿನಿಯ ಸಹಭಾಗಿತ್ವದಲ್ಲಿ ತುಳು ರಿಯಾಲಿಟಿ ಶೋ ಬಲೇ ತೆಲಿಪಾಲೆ ಸೀಸನ್ ಎರಡರ ಫೈನಲ್ ಪಂದ್ಯ ಜರಗಿತು. ಫೈನಲ್ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ದ್ವಿತೀಯ ಸ್ಥಾನವನ್ನು ತೆಲಿಕೆದ ತೆನಾಲಿ ಕಾರ್ಕಳ 1.50ಲಕ್ಷ ರೂ. ಬಹುಮಾನದೊಂದಿಗೆ ಪ್ರಶಸ್ತಿ ಪಡೆದರೆ, ತೃತೀಯ ಸ್ಥಾನವನ್ನು ಶೋಭಾ ರೈ ನೇತೃತ್ವದ ತಂಡ ಒಂದು ಲಕ್ಷ ರೂ. ಬಹುಮಾನದೊಂದಿಗೆ ಪ್ರಶಸ್ತಿಯನ್ನು ಪಡೆದುಕೊಂಡಿತು. ನಾಲ್ಕನೇ ಪ್ರಶಸ್ತಿ ಯನ್ನು 75 ಸಾವಿರದೊಂದಿಗೆ ಉಮೇಶ್ ಮೀಜಾರು ತಂಡ ಪಡೆದಿದೆ. ಐದನೇ ಸ್ಥಾನವನ್ನು 50 ಸಾವಿರ ನಗದಿನೊಂದಿಗೆ ಮಂಜು ರೈ ನೇತೃತ್ವದ ಸಾರಥಿ ಕುಡ್ಲ ಪಡೆದಿದೆ. ಆರನೇ ಸ್ಥಾನ 25 ಸಾವಿರ ನಗದಿನೊಂದಿಗೆ ಅಭಿನಯ ಉಡುಪಿ ಪ್ರಶಸ್ತಿಯನ್ನು ಗಳಿಸಿದೆ. ರಂಜನ್ ಬೋಳೂರು ಮತ್ತು ಅರುಣ್ ಚಂದ್ರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಕಿಕ್ಕಿರಿದ ಜನಸಾಗರದ ನಡುವೆ ನಡೆದ ಫೈನಲ್ ವಿಭಾಗದಲ್ಲಿ ದೇಗುಲದ ಸನ್ನಿಧಿಯಲ್ಲಿ ಹಾಸ್ಯಲೋಕ ವನ್ನೇ ಸೃಷ್ಟಿಸಿತು. ಕಾರ್ಯಕ್ರಮದ ಪ್ರಧಾನ ಸಂಘಟಕ ವಿಜಯನಾಥ ವಿಠಲ ಶೆಟ್ಟಿ, ನಮ್ಮ ಟಿ.ವಿ.ಯ ಮುಖ್ಯಸ್ಥ ಡಾ. ಶಿವಚರಣ್ ಶೆಟ್ಟಿ, ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತೀರ್ಪುಗಾರರಾಗಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ಸಂಯೋಜಿಸಿದರು. ಪ್ರಥಮ ಪ್ರಶಸ್ತಿ ಪಡೆದ ಪ್ರಶಂಸ ಕಾಪು ತಂಡದಲ್ಲಿ ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ಮರ್ವಿನ್ ಅಭಿನಯಿಸಿದ್ದಾರೆ. ಶರತ್ ಉಚ್ಚಿಲ ಸಂಗೀತ ಒದಗಿಸಿ ದ್ದಾರೆ. ಬಲೇ ತೆಲಿಪಾಲೆ ಸ್ಪರ್ಧೆಯಲ್ಲಿ ಕಾಪು ಪ್ರಶಂಸ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಗಳಿಸಿದೆ.
