ಬಂಟ್ವಾಳ ; ಆಕಾಂಕ್ಷಾ ಸಂಸ್ಥೆಯು ಜ್ಞಾನದ ಜೊತೆ ಸಾಮಾಜಿಕ ಕಳಕಳಿ, ಕೌಶಲಾಭಿವೃದ್ಧಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುತ್ತಿದೆ. ಸಂದರ್ಭಕ್ಕನುಗುಣವಾಗಿ  ಜೀವನ ಕೌಶಲಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಖೆಯು ಉಪನಿರ್ದೇಶಕರಾದ ವಾಲ್ಟರ್ ಡಿ ಮೆಲ್ಲೊ ಹೇಳಿದರು.

aakanksha-shamboor-1

ಬೊಂಡಾಲ ಜಗ್ಗನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಶಂಭೂರು ಇಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ, ರೋಟರಿ ಕ್ಲಬ್, ಬಂಟ್ವಾಳ ಇವರ ಆಶ್ರಯದಲ್ಲಿ ನಡೆದ ಎರಡು ದಿನಗಳ “ಪ್ರೇರಣಾ-2016” ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ, ಶಾಲಾ ಸಂಚಾಲಕರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಯವರು ಮಾತನಾಡಿ, ಆಕಾಂಕ್ಷಾ ಟ್ರಸ್ಟ್ ಒಂದು ಸಮಾನ ಮನಸ್ಕರ ತಂಡ, ಇದರ ಹೆಸರೇ ಸೂಚಿಸುವಂತೆ ಇದು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಆಕಾಂಕ್ಷೆಯನ್ನು ಮೂಡಿಸುವ ತಂಡವಾಗಿದೆ ಹಾಗೂ ಈ “ಪ್ರೇರಣಾ” ಕಾರ್ಯಾಗಾರವು ಎಲ್ಲಾ ಮಕ್ಕಳಲ್ಲಿಯೂ ಪ್ರೇರಣೆಯನ್ನು ತುಂಬಲಿ ಎಂದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ರಿತೇಶ್ ಬಾಳಿಗ, ಶಂಭೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ನಾಟಿ ಕೃಷ್ಣರಾಜ ಶೆಟ್ಟಿ, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀಶ ಭಟ್ , ಶ್ರೀಕಾಂತ್ ಉಪಸ್ಥಿತರಿದ್ದರು. ಶಂಭೂರು ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಂಭೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಮಲಾಕ್ಷ ಇವರು ಸ್ವಾಗತಿಸಿದರು. ಆಕಾಂಕ್ಷ ಟ್ರಸ್ಟ್ ಸದಸ್ಯೆ ನಿವೇದಿತ ಇವರು ಕಾರ್ಯಕ್ರಮ ನಿರೂಪಿಸಿದರು. ಒಟ್ಟು 32 ಶಾಲೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.

By suddi9

Leave a Reply

Your email address will not be published. Required fields are marked *