ಬಂಟ್ವಾಳ: ತಾಲ್ಲೂಕಿನ ಕೊಯಿಲದಲ್ಲಿ ಕಳೆದ 24ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಇದೇ 8ರಿಂದ 9ರತನಕ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಹಿನ್ನೆಲೆಯಲ್ಲಿ 200ಮೀ. ವಿಸ್ತೀರ್ಣದ ಕ್ರೀಡಾಂಗಣ ನಿಮರ್ಾಣ ಕಾಮಗಾರಿಗೆ ಸೋಮವಾರ ಸಂಜೆ ಪೂರ್ಣಗೊಳಿಸಿ ಸಿದ್ಧಗೊಳಿಸಲಾಯಿತು.

koila-1

ಕಳೆದ 1991 ರಲ್ಲಿ ಸ್ಥಳೀಯ ಸ್ಥಳದಾನಿ ಕೆ.ಉಮಾಬಾಯಿ ಎಂಬವರು ಉದಾರವಾಗಿ ನೀಡಿದ ಜಮೀನಿನಲ್ಲಿ ಬಂಟ್ವಾಳ ತಾಲ್ಲೂಕು ಬೋರ್ಡಿನ ಮಾಜಿ ಅಧ್ಯಕ್ಷ ದಿವಂಗತ ಕೆ.ಸದಾಶಿವ ಭಂಡಾರಿ ಅವರ ಉತ್ಸುಕತೆಯಲ್ಲಿ ಎಂಟನೇ ತರಗತಿ ಮೂಲಕ ಪ್ರೌಢಶಾಲೆ ಆರಂಭಗೊಂಡಿದೆ. ಇದೀಗ ಒಟ್ಟು 289 ಮಂದಿ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಲ್ಲಿ ಪ್ರತೀ ವರ್ಷ ಶೇ.90ಕ್ಕಿಂತಲೂ ಮಿಕ್ಕಿ ಫಲಿತಾಂಶ ದಾಖಲಿಸುತ್ತಿರುವುದು ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾಧನೆಯಾಗಿದೆ.

ಈ ವರ್ಷ ಎಂಟನೇ ತರಗತಿಗೆ ಆಂಗ್ಲ ಭಾಷೆ ತರಗತಿ ಆರಂಭಿಸಿರುವುದು ಮಕ್ಕಲಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ. ಇದೇ 26ರಂದು ನಡೆಯಲಿರುವ ಶಾಲೆಯ ಬೆಳ್ಳಿಹಬ್ಬ ಸಂಭ್ರಮ ಪ್ರಯುಕ್ತ ಇದೇ 8ರಿಂದ 9ರತನಕ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಮುಖ್ಯಶಿಕ್ಷಕ ಸುಧೀರ್ ಜಿ. ತಿಳಿಸಿದ್ದಾರೆ.

ದೈಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ್ ಬಾಗೇವಾಡಿ ಸಹಿತ ತಾಲ್ಲೂಕಿನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ಕರ್ಕೇರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ, ಗೌರವಾಧ್ಯಕ್ಷ ಕೆ.ಪದ್ಮರಾಜ ಬಲ್ಲಾಳ್ ಮತ್ತಿತರರು ಬೆಳ್ಳಿಹಬ್ಬ ಸಂಭ್ರಮಾಚರಣೆಗೆ ಶ್ರಮಿಸುತ್ತಿದ್ದು, ಸಮಿತಿ ಗೌರವಾಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈಗಾಗಲೇ ರೂ 40ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣಕ್ಕೆ ತಡೆಗೋಡೆ ಕಾಮಗಾರಿ ನಡೆಸಿದ್ದಾರೆ.

By Suddi9

Leave a Reply

Your email address will not be published. Required fields are marked *