ಬಂಟ್ವಾಳ: ಸಹಕಾರಿ ಸದಸ್ಯರಿಗೆ , ಠೇವಣಿದಾರರಿಗೆ ಮತ್ತು ಗ್ರಾಹಕರಿಗೆ ಚಳವಳಿ ಮೂಲಕ ಸಹಕಾರಿ ಕ್ಷೇತ್ರ ಎಷ್ಟು ಸುಧೃಡವಾಗಿದೆ ಎನ್ನುವುದನ್ನು ತೋರಿಸುವ ಕೆಲಸ ಈ ಮೂಲಕ ನಡೆಯಬೇಕಿದೆ ಎಂದು ಎಸ್.ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಾರಾಮ್ ಭಟ್ ಹೇಳಿದರು.

samaropa-sabhe

ಅವರು ಮಂಗಳೂರಿನಲ್ಲಿ ನ.18ರಂದು ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಆಚರಣೆ ಬಗ್ಗೆ ಬಂಟ್ವಾಳ ಯಶವಂತ ವ್ಯಾಯಮ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಸಹಕಾರಿಗಳ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ , ಸಹಕಾರಿ ಹೋರಾಟವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು ಅದಕ್ಕೆ ಎಲ್ಲಾ ಸಹಕಾರಿ ಕ್ಷೇತ್ರದ ಬಂಧುಗಳ ಸಹಕಾರ ಅತ್ಯಗತ್ಯವಾಗಿ ಬೇಕು ಎಂದರು.

ವೇದಿಕೆಯಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ , ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಅಚಾರ್ಯ ,ಬಂಟ್ವಾಳ ಸಹಾಕಾರಿ ಯೂನಿಯನ್ ಅಧ್ಯಕ್ಷ ಜಿ ಆನಂದ , ಸಹಕಾರಿ ಸಂಘಗಳ ಮುಖ್ಯ ನಿರ್ವಾಹಾಣಾಧಿಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಅಲ್ಬರ್ಟ ಡಿಸೋಜ . ಸಹಕಾರಿ ಅಧಿಕಾರಿಗಳಾದ ಎಚ್ ದೇವಾಡಿಗ, ತ್ರಿವೇಣಿರಾವ್, ವಲಯ ಮೇಲ್ವಿಚಾರಕಜರಾದ ಕೇಶವ ಕಿಣಿ ಮತ್ತು ಯೋಗೀಶ್ ಉಪಸ್ಥಿತರಿದ್ದರು.  ಬಂಟ್ವಾಳ ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ಬಿಕೆ.ಸಲಿ ಪ್ರಸ್ತಾವನೆಗೈದರು, ಮಂಗಳೂರು ಸ್ಕಾಡ್ಸ್ ನ ಅಧ್ಯಕ್ಷ ರವೀಂದ್ರ ಕಂಬಳಿ ವಂದಿಸಿದರು, ಸುಭಾಶ್‍ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *