ಬಂಟ್ವಾಳ : ಇತ್ತೀಚೆಗೆ ಮೃತಪಟ್ಟ ನರಿಕೊಂಬು ಮರ್ದೊಳಿ ನಿವಾಸಿ ವೆಂಕಟೇಶ್ ರವರ ಮನೆಗೆ ಭೇಟಿ ನೀಡಿದ ನರಿಕೊಂಬು ವಲಯ ಕಾಂಗ್ರೆಸ್ ತಂಡ ತನ್ಮೂಲಕ ಸಂಗ್ರಹಿಸಿದ ಸಹಾಯಧನವನ್ನು ಮೃತರ ಪತ್ನಿಗೆ ಹಸ್ತಾಂತರಿಸಿದರು. ನರಿಕೊಂಬು ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಬೋಳಂತೂರು, ಲಿಂಗಪ್ಪ ಕೊಟ್ಟಾರಿ, ಭರತ್ ರಾಜ್, ಉಮೇಶ್ ನೆಲ್ಲಿಗುಡ್ಡೆ, ದಿವಾಕರ ಏಲಬೆ, ಗೋಪಾಲ್ ಟೈಲರ್, ಮಹಾಬಲ ನಾಯಿಲ , ಸುನಿಲ್, ಪ್ರವೀಣ್ ಉಪಸ್ಥಿತರಿದ್ದರು.

