ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಈ ಹಿಂದೆ ಬೆರಳೆಣಿಕೆ ಮಂದಿ ಮಾತ್ರ ಪಟ್ಟಾದಾರರು ಮತ್ತು ಜಮೀನ್ದಾರರಿದ್ದು, ಅಂದು ಎಲ್ಲರಿಗೂ ಶಿಕ್ಷಣ ಮತ್ತು ಆಹಾರ ಜೊತೆಗೆ ಸಮಾನತೆ ದೊರೆತಿರಲಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಹಸಿವುಮುಕ್ತ ಮತ್ತು ಸ್ವಾಭಿಮಾನದ ಬದುಕು ನೀಡಲು ಸರ್ಕಾರವು ಕೈಗೊಂಡ ಭೂಮಸೂದೆ ಮತ್ತಿತರ ದೂರದರ್ಶಿತ್ವದ ಯೋಜನೆ ಬಗ್ಗೆ ಇಂದಿನ ಯುವಜನತೆಗೆ ಇತಿಹಾಸ ಗೊತ್ತಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

6btl-shanmukha

ಇಲ್ಲಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ಷಣ್ಮುಖ ಕಲಾ ತಂಡದ ವತಿಯಿಂದ ಕೈತ್ರೋಡಿ ಮೈದಾನದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ‘ಷಣ್ಮುಖ ಸಾಂಸ್ಕೃತಿಕ ಸ್ವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಸಾಕಷ್ಟು ಅವಕಾಶ ಮತ್ತು ಪ್ರೋತ್ಸಾಹಗಳಿದ್ದರೂ ಗ್ರಾಮೀಣ ಪ್ರತಿಭೆ ಮತ್ತು ಕಲಾವಿದರು ಮಾತ್ರ ಇಂದು ಎಲ್ಲೆಡೆ ಪ್ರಸಿದ್ಧಿಯಲ್ಲಿದ್ದಾರೆ ಎಂದರು.

ಉಪನ್ಯಾಸಕಿ ಅಕ್ಷಯ ಗೋಖಲೆ ಕಾರ್ಕಳ ಇವರು ಧಾರ್ಮಿಕ ಉಪನ್ಯಾಸ ನೀಡಿ, ಯುವಜನರಲ್ಲಿ ಧಾರ್ಮಿಕತೆ ಜೊತೆಗೆ ರಾಷ್ಟ್ರಭಕ್ತಿ ಮತ್ತು ದೇಶೀಯ ಸಂಸ್ಕøತಿ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿ ಮಕ್ಕಳ ಪೋಷಕರಲ್ಲಿದೆ ಎಂದರು.

shanmukha-1

ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಹಿರಿಯ ಸದಸ್ಯೆ ನಿರುಪಮಾ ಎಸ್.ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಪ್ರಭಾಕರ ಪ್ರಭು, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಶೆಟ್ಟಿ ಮಜಲೋಡಿ, ಪ್ರಮುಖರಾದ ದುರ್ಗಾದಾಸ ಶೆಟ್ಟಿ ಮಾವಂತೂರು, ರಶ್ಮಿತ್ ಶೆಟ್ಟಿ ಕೈತ್ರೋಡಿ, ನಿತ್ಯಾನಂದ ಪೂಜಾರಿ ಕೆಂತಲೆ, ವಿಶ್ವನಾಥ ಕೋಟ್ಯಾನ್ ಅಳಿಯೂರು, ಪ್ರಕಾಶ ಅಂಚನ್, ವಿಶ್ವೇಶ್ವರ ಎನ್.ಎಂ., ರಂಜಿತ್ ಪೂಜಾರಿ ಮೂಡುಬಿದ್ರೆ, ಸಂತೋಷ್ ಕುಮಾರ್ ಬೆಟ್ಟು, ಲೋಕೇಶ ಪೆದಮಲೆ, ಹೇಮಚಂದ್ರ ಸಿದ್ಧಕಟ್ಟೆ, ದಿನೇಶ ಶೆಟ್ಟಿ ದಂಬೆದಾರು, ಸತೀಶ ಆಚಾರ್ಯ ಬೆಂಗಳೂರು, ಪ್ರಶಾಂತ ಶೆಟ್ಟಿ ಬಾಕ್ಯಾರ್ಕೋಡಿ ಮತ್ತಿತರರು ಇದ್ದರು. ಶಿಕ್ಷಕ ಮಹೇಶ ಕರ್ಕೇರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ದಿನೇಶ ಸುವರ್ಣ ವಂದಿಸಿದರು. ರಂಗಭೂಮಿ ಕಲಾವಿದ ಎಚಕೆ ನಯನಾಡು ಮತ್ತು ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ಸ್ಮರಣಾರ್ಥ’ಉಚಿತ ಆರೋಗ್ಯ ತಪಾಸಣಾ ಶಿಬಿರ’ ನಡೆಯಿತು. ಸಂಜೆ ನಡೆದ ‘ಐಸಿರದ ರಂಗ್ ರಂಗಿತದ ಲೇಸ್’ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಗೋಪಾಲ ಅಂಚನ್ ಮತ್ತು ಮೋಹನ್ ಕೆ.ಶ್ರೀಯಾನ್ ರಾಯಿ ಇವರು ತಂಡದ ಬಾಲ ಕಲಾವಿದರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಇದೇ ವೇಳೆ ರಂಗಭೂಮಿ ಕಲಾವಿದರಾದ ಎಚ್ಕೆ ನಯನಾಡು, ರಾಜ್‍ಪಾಲ್ ಕಲ್ಲಡ್ಕ, ಭಾಸ್ಕರ ರಾವ್ ಬಿ.ಸಿ.ರೋಡ್, ಪುರಂದರ ನಾಗನವಳಚ್ಚಿಲ್, ಭಾಸ್ಕರ ಆಚಾರ್ಯ, ಸಂದೀಪ್ ಶೆಟ್ಟಿ ರಾಯಿ, ಶಿಕ್ಷಕ ಮಹೇಶ ಕರ್ಕೇರ, ಸುರೇಶ ಆಚಾರ್ಯ, ದೈವನರ್ತಕ ಲೋಕೇಶ ಕೈತ್ರೋಡಿ, ಸಂಚಾಲಕ ರವೀಂದ್ರ ಪೂಜಾರಿ ಬದನಡಿ, ನಿರ್ದೇಶಕ ದಿನೇಶ ಸುವರ್ಣ, ಕಲಾವಿದೆ ರಮಿತ ರಾಯಿ ಮತ್ತು ಶ್ರಾವ್ಯ ಕೊಲ್ಯ ಇವರನ್ನು ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *