ಬಂಟ್ವಾಳ: ಎರಡು ದಿನಗಳ ಹಿಂದೆಯಷ್ಟೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಗೊಳಿಸಿ ಹೊರಬಿದ್ದ ಪಟ್ಟಿಯಲ್ಲಿ ಹಠಾತ್ ಬೆಳವಣಿಗೆಯೊಂದರಲ್ಲಿ ರಾಜ್ಯ ಗೇರು ನಿಗಮದ ಅಧ್ಯಕ್ಷರ ಬದಲಾವಣೆಯಾಗಿದೆ.ಮೊದಲ ಪಟ್ಟಿಯಲ್ಲಿ ಸುಳ್ಯದ ವಹೀದಾ ಇಸ್ಮಾಯಿಲ್ ಅವರನ್ನು ಗೇರುನಿಗಮದ ಅಧ್ಯಕ್ಷರನ್ನಾಗಿಸಿ ಹೊರಡಿಸಲಾದ ಆದೇಶವನ್ನು ರದ್ದುಪಡಿಸಿ ಬಂಟ್ವಾಳದ ಹಿರಿಯ ಕಾಂಗ್ರೆಸ್ಸಿಗ ಬಿ.ಎಚ್.ಖಾದರ್ ಅವರಿಗೆ ಈ ಹುದ್ದೆ ನೀಡಿ ಶನಿವಾರ ಸಂಜೆ ಹೊಸ ಆದೇಶ ಹೊರ ಬಿದ್ದಿದೆ.ಬಂಟ್ವಾಳಕೆಳಗಿನಪೇಟೆ ನಿವಾಸಿಯಾಗಿರುವ ಬಿ.ಎಚ್.ಖಾದರ್ ಸುಮಾರು ನಾಲ್ಕು ದಶಕಗಳಿಗಿಂತಲೂ ಕಾಂಗ್ರಸ್ ಪಕ್ಷದಲ್ಲಿ ದುಡಿಯುತ್ತಿದ್ದರು.ಸಚಿವ ರಮಾನಾಥ ರೈಯವರ ಪರಮಾಪ್ತರಾಗಿದ್ದರೂ ಅವರಿಗೆ ಇದುವರೆಗೂ ಲಾಭದಾಯಕ ಹುದ್ದೆ ಸಿಕ್ಕಿರಲಿಲ್ಲ.ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದು,ಕರಾವಳಿ ಅಭಿವ್ರದ್ದಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದರು.ಆದರೆ ಅದು ಕುಮುಟಾ ಶಾಸಕಿ ಶಾರದಾ ಮೋಹನ್ ಅವರ ಪಾಲಾಗಿತ್ತು.ಗೇರು ನಿಗಮಕ್ಕೆ ಈಮೊದಲು ನೇಮಕವಾಗಿದ್ದ ವಹೀದಾರವರ ಪತಿ ಇತ್ತೀಚೆಗೆ ಕೊಲೆಗೀಡಾಗಿದ್ದರು.ಹಾಗಯೇ ಸುಳ್ಯದ ದಿವ್ಯಪ್ರಭಾರವರು ನಿಗಮವೊಂದರ ಅಧ್ಯಕ್ಷರಾಗಿರುವುದರಿಂದ ಮತ್ತು ಬಂಟ್ವಾಳಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕದಿರುವುದರಿಂದ ಹಠಾತ್ ಬೆಳವಣಿಗೆಯೊಂದರಲ್ಲಿ ಅವರ ಆದೇಶ ರದ್ದುಗೊಂಡು ಗೇರು ನಿಗಮದ ಅಧ್ಯಕ್ಷ ಹುದ್ದೆ ಆಹ೯ವಾಗಿಯೇ ಸರಳ ಸಜ್ಜನಿಕೆ ವ್ಯಕ್ತಿತ್ವದ ಖಾದರ್ ಅವರಿಗೆ ದಕ್ಕಿದೆ

