ಸುದ್ದಿ9 ಕೈಕಂಬ: ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಸಲ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳೆಲ್ಲಾ ಮೂಲೆ ಸೇರಿ, ಕುದುರೆಗಾಡಿ, ಬೋರಿಗಾಡಿ ರೋಡಿಗಿಳಿದು ಮತ್ತೆ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಒಂದರ್ಥದಲ್ಲಿ ಹಳೆ ಶಿಲಾಯುಗ ಮತ್ತೆ ಮರುಕಳಿಸಿದೆ ಎಂದೇ ಹೇಳಬಹುದು.

27 vp  ethina bhandi 1

28 vp ethina bandi 1 28 vp ethina bandi 3
ಹೌದು ಇದು ಕಂಡುಬಂದಿದ್ದು ಕೈಕಂಬ ಸಮೀಪದ ಭಟ್ರಕೆರೆ ಎಂಬಲ್ಲಿ. ಸ್ಟ್ಯಾನಿ ಪೊಬರ್ು ಎಂಬವರು ಜೋಡೆತ್ತುಗಳನ್ನು ಸಾಕಿ ಅದಕ್ಕೆ ಸೂಕ್ತ ತರಬೇತಿ ನೀಡಿ ರೋಡಿಗಿಳಿಸಿದ್ದಾರೆ. ಯಾವುದೇ ವಾಹನಗಳಿಗೆ ಕಡಿಮೆ ಇಲ್ಲ ಎಂಬಂತೆ ವಾಹನಗಳಿಗೆ ಸಮಾನವಾಗಿ ಸಂಚಾರ ನಡೆಸುತ್ತದೆ.
ಸ್ಟ್ಯಾನಿ ಎಂಬವರು ಎತ್ತಿನ ಬಂಡಿಯ ಮೂಲಕ ಸರಕು ಸಾಗಾಟ ನಡೆಸುತ್ತಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಎತ್ತಿನ ಬಂಡಿ ಸಾಮಾನ್ಯವಾಗಿತ್ತು. ರಸ್ತೆ ಇಲ್ಲದ ಸಮಯದಲ್ಲಿ ಈ ಬಂಡಿಗಳನ್ನು ಬಳಸಲಾಗುತ್ತಿತ್ತು. ಆಧುನಿಕತೆಯ ಭರಾಟೆಯಲ್ಲಿ ಎತ್ತಿನ ಬಂಡಿ ಗೂಡು ಸೇರಿತ್ತು. ಆದರೆ ಇತ್ತೀಚೆಗೆ ಖಚ್ಚಾತೈಲದ ಬೆಲೆ ವಿಪರೀತವಾಗಿರುವುದರ ಹಿನ್ನೆಲೆಯಲ್ಲಿ ಮತ್ತೆ ಎತ್ತಿನ ಬಂಡಿ ರಸ್ತೆಗಿಳಿಯುವುದರಲ್ಲಿ ಅಚ್ಚರಿ ಇಲ್ಲ.

By suddi9

Leave a Reply

Your email address will not be published. Required fields are marked *