ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮಾಣಿ ಕೊಡಾಜೆ ಎಸ್‍ಎಸ್ ಗೈಸ್ ವತಿಯಿಂದ ಭಾನುವಾರ ನಡೆದ 55ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪೆರಾಜೆ ಪಿಂಕ್ ಪ್ಯಾಂಥರ್ಸ್ ತಂಡವು ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು. ಒಟ್ಟು 20 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಬೋಳಂತೂರು-ಕಲ್ಪನೆ ಸೆವೆನ್ ಬ್ರದರ್ಸ್ ತಂಡ ದ್ವಿತೀಯ, ಕನಪಾದೆ ಸತ್ಯದೇವತಾ ತಂಡ ತೃತೀಯ ಹಾಗೂ ಕಂಬಳಬೆಟ್ಟು ಸೌಹಾರ್ದ ಫ್ರೆಂಡ್ಸ್ ತಂಡ ಚತುರ್ಥ ಸ್ಥಾನ ಗೆದ್ದುಕೊಂಡಿತು. ಪೆರಾಜೆ ತಂಡದ ಗಣೇಶ್ ಉತ್ತಮ ದಾಳಿಗಾರ, ಯಲ್ಲಪ್ಪ ಉತ್ತಮ ಹಿಡಿತಗಾರ ಹಾಗೂ ಕಲ್ಪನೆ ತಂಡದ ಫಾರೂಕ್ ಆಲ್‍ರೌಂಡರ್ ಪ್ರಶಸ್ತಿಗೆ ಪಾತ್ರರಾದರು.

31btl-kabaddi
ಪ್ರಗತಿಪರ ಕೃಷಿಕ ಶಿವರಾಮ ಶೆಟ್ಟಿ ಪಂದ್ಯಾಟ ಉದ್ಘಾಟಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕುಶಲ ಎಂ. ಪೆರಾಜೆ, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ ರೈ, ಸುದೀಪ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಅರವಿಂದ ಕೊಂಡೆ ಗೋಳಿಕಟ್ಟೆ, ಹಸೈನಾರ್ ಕೊಡಾಜೆ, ಜಗದೀಶ್ ಕೊಡಾಜೆ, ರಝಾಕ್ ಗುಲ್ಝಾರ್ ಅನಂತಾಡಿ, ಬದ್ರುದ್ದೀನ್ ಕೊಡಾಜೆ, ಸಲೀಂ ಮಾಣಿ, ಪ್ರಶಾಂತ್ ಗಣೇಶನಗರ, ನಿತಿನ್ ರೈ, ಸುಲೈಮಾನ್ ಪಂತಡ್ಕ, ಸುನಿಲ್ ಪಂತಡ್ಕ, ಇಸಾಕ್ ಕೆಂಪುಗುಡ್ಡೆ, ಲೋಕೇಶ್ ಬಂಟ್ರಿಂಜ, ಶರೀಫ್ ಎಸ್‍ಎಸ್ ಕೊಡಾಜೆ ಮತ್ತಿತರರು ಇದ್ದರು.
ಅಬ್ಬಾಸ್ ಸ್ವಾಗತಿಸಿ, ಫಾರೂಕ್ ಆರಂಗಳ ವಂದಿಸಿದರು. ಶಾಕಿರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *