ಬಂಟ್ವಾಳ:ಸಮಾಜಮುಖಿ ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಕೀರ್ತಿ ಮತ್ತು ಸಂಪತ್ತು ಲಭ್ಯವಾಗುತ್ತದೆ ವಿಧಾನಸಭೆ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ ಹೇಳಿದ್ದಾರೆ.
ತಾಲ್ಲೂಕಿನ ಬಂಟರ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಸಮೀಪದ ವಳವೂರು ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ಉದ್ಘಾಟನೆಗೊಂಡ ‘ಬಂಟವಾಳದ ಬಂಟರ ಭವನ’ದಲ್ಲಿ ನಡೆದ ಬಂಟ ಮಹಿಳಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಂಟ ಸಮಾಜವು ಸುಸಂಸ್ಕøತ ಕೌಟುಂಬಿಕ ಪದ್ಧತಿ ಮೂಲಕ ಮಾತೃಶಕ್ತಿಗೆ ಪ್ರಧಾನ್ಯತೆ ನೀಡಿದ್ದು, ನಾಯಕತ್ವ ವಹಿಸುವ ಶಕ್ತಿ ಕೂಡಾ ಮಹಿಳೆಗೆ ಸಿಗಬೇಕು ಎಂದು ಅವರು ಹೇಳಿದರು.ರಾಜ್ಯ ಮಕ್ಕಳ ಹಕ್ಕುಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಮಾತನಾಡಿ, ಪ್ರತೀ ಪುರುಷನ ಸಾಧನೆ ಹಿಂದಿರುವ ಮಹಿಳೆಗೂ ಗೌರವ ಸಿಗಬೇಕು ಎಂದು ಹೇಳಿದ ಅವರು, ಸ್ವಾರ್ಥ ಮತ್ತು ಅಹಂನಿಂದಾಗಿ ಪ್ರಸಕ್ತ ವಿಚ್ಚೇದನ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂದರು.

31btl-mahile
ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಆಶಾ ಜ್ಯೋತಿ ಎ.ರೈ ಮಾಲಾಡಿ ಮಾತನಾಡಿ ಬಂಟರು ಎಂದರೆ ಗೆಲ್ಲುವವರು ಎಂಬರ್ಥ ಇದೆ ಎಂದರು.
ಮಹಾರಾಷ್ಟ್ರ ಪುಣೆ ತಿಲಕ ವಿದ್ಯಾಪೀಠದ ಮಾಜಿ ಉಪಕುಲಪತಿ ಡಾ. ಹೀರಾ ಅಡ್ಯಂತಾಯ ಮಾತನಾಡಿ, ತಾಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಮುಂಬೈ ಬಂಟರ ಸಂಘದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಮುಂಬಯಿ, ಸಾಹಿತಿ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ಇಂಡಿಗೋ ಏರ್‍ಲೈನ್ ಕ್ಯಾಪ್ಟನ್ ಕೀರ್ತಿ ಜೆ. ಶೆಟ್ಟಿ ಮುಂಬಯಿ ಮತ್ತಿತರರು ಮಾತನಾಡಿದರು.
ಕಟ್ಟಡ ಸಮಿತಿ ಸಂಚಾಲಕ ಡಾ. ಪ್ರಶಾಂತ್ ಮಾರ್ಲ, ಸಂಧ್ಯಾ ವಿ. ಶೆಟ್ಟಿ ನಗ್ರಿಗುತ್ತು ಮತ್ತಿತರರು ಇದ್ದರು.
ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ, ವಕೀಲೆ ಆಶಾಪ್ರಸಾದ್ ರೈ ಪ್ರಾಸ್ತಾವಿಕ ಮಾತನಾಡಿದರು. ರಮಾ ಎಸ್.ಭಂಡಾರಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಮತ್ತು ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *