ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾರ್ಯಾದಕ್ಷರಾಗಿ ಸಿರಾಜ್ ಅಡ್ಕರೆಯವರನ್ನು ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರು ನೇಮಕ ಮಾಡಿರುತ್ತಾರೆ.

siraj

ಸಿರಾಜ್ ಅಡ್ಕರೆಯವರು ಪ್ರಸ್ತುತ ತುರವೇ ಕೇಂದ್ರೀಯ ಮಂಡಳಿಯ ಸದಸ್ಯರಾಗಿ, ತುರವೇ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಶಿಕ್ಷಕರ ಅಭಿಮಾನಿ ಸಂಘದ ರಾಜ್ಯಾದ್ಯಕ್ಷರಾಗಿ, ಟಿಪ್ಪು ಸುಲ್ತಾನ್ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷರಾಗಿ, ಗ್ರೀನ್ ವೀವ್ ಪ್ರಾಥಮಿಕ ಹಾಗು ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಸಂಘದ ಪ್ರ. ಕಾರ್ಯದರ್ಶಿಯಾಗಿ, ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ, ಜಾತ್ಯಾತೀತ ಜನತಾ ದಳದ ವಿಧ್ಯಾರ್ಥಿ ಘಟಕದ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಯುವ ಹೋರಾಟಗಾರರಾಗಿರುವ ಇವರು ನೇತ್ರಾವತಿ(ಎತ್ತಿನ ಹೊಳೆ) ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿ ಕೊಂಡು, ಜಿಲ್ಲೆಯ ಪ್ರಮುಖ ಹೋರಾಟಗಾರರೊಂದಿಗೆ ಮುಂದುವರೆಯುತ್ತಿದ್ದಾರೆ, ಇವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಅರಣ್ಯ ಇಲಾಖೆ, ಸಯ್ಯದ್ ಮದನಿ ದರ್ಗಾ ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ.

By suddi9

Leave a Reply

Your email address will not be published. Required fields are marked *