ಬಂಟ್ವಾಳ : ಲಿಂಗಸಮಾನತೆ ಮತ್ತು ಪೂರಕ ಶಿಕ್ಷಣದಿಂದಾಗಿ ಬಂಟ ಸಮಾಜ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆ ಸಾಧಿಸಿದ್ದು, ಇತರ ಎಲ್ಲಾ ಸಮಾಜಗಳಿಗೂ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಬಿ.ಸಿ.ರೋಡ್-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ವಳವೂರಿನಲ್ಲಿ ನಿರ್ಮಾಣಗೊಂಡಿರುವ ‘ಬಂಟವಾಳದ ಬಂಟರ ಭವನ’ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕರಜನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬಂಟ ಸಮಾಜದವರು ಮೈಗೂಡಿಸಿಕೊಂಡಿರುವ ಸಾಹಸಪ್ರವೃತ್ತಿ, ಉದ್ಯಮ ಶೀಲತೆ, ಶಿಕ್ಷಣ., ಬ್ಯಾಂಕಿಂಗ್ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ಪರಂಪರೆ ಬಂಟ ಸಮಾಜದಲ್ಲಿ ನಿರಂತರವಾಗಿ ಮುಂದುವರಿಯಲಿ ಎಂದರು. ಬಂಟ ಸಮಾಜದಲ್ಲಿ ಅನೇಕ ಕೊಡುಗೈ ದಾನಿಗಳಿದ್ದರೆ. ಇವರ ಕೊಡುಗೆಗಳು ಎಲ್ಲಾ ಸಮಾಜಕ್ಕೂ ದೊರಕಲಿ ಎಂದು ಆಶಿಸಿದ ಸಿಎಂ ಬಂಟರು ಸಾಮಾಜಿವಾಗಿ ಆರ್ಥೀಕವಾಗಿ ಸಬಲರಾಗಿರುವುದು ಸ್ವಾಗತರ್ಹ ಎಂದರು.

21

2-1

5-1

7-1

10-1

11-1

1-1

4-1

23

25

22

ಈ ಸಮಾಜವನ್ನು ಶಿಕ್ಷಣ ಬಂಟರು ಸಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರಿಯುತಾ ಬಂದಿದೆ. ಆ ಸಮಾಜದ ಸಂಘ ಜೀವಿಗಳು, ಕೇವಲ ಸಮಾಜಕ್ಕೆ ಸೀಮಿತವಾಗಿರುವುದಲ್ಲ.ರಾಜ್ಯಮಟ್ಟದಲ್ಲಿ ಕಟ್ಟಬಹುದಾದ ಕಟ್ಟಡವನ್ನು ಬಂಟ್ವಾಳದಲ್ಲಿ ನಿರ್ಮಿಸಿದ್ದರಿ ಎಂದು ಅಭಿನಂದಿಸಿದ ಮುಖ್ಯಮಂತ್ರಿ ಬಂಟ್ವಾಳದ ಬಂಟರ ಭವನಕ್ಕೆ ಒಂದು ಕೋಟಿ ರೂ ಅನುದಾನ ನೀಡುವುದಾಗಿ ಘೋಷಿಸಿದರು. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲೂ ಬೆಳಕನ್ನು ತರಲಿಎಂದು ದೀಪಾವಳಿಯ ಶುಭಾಶಯ ಕೋರಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಂಟರಭವನವನ್ನು ಸಾಂಪ್ರಾದಾಯಿಕ ಶೈಲಿಯಲ್ಲಿ ಉದ್ಘಾಟಿಸಿದರು. ಅವರು ಮಾತನಾಡಿ ತುಳುನಾಡಿ ಸಂಸ್ಕøಇತಿಯ ಮೂಲ ಪುರಷರು ಬಂಟರು. ಇವರ ಪೂರ್ವಜರು ಜೈನ ಸಮಾಜದವಾಋಗಿದ್ದರು ಬಳಿಕ ಪರಿವರ್ತನೆಯಗೊಂಡು ಬಂಟರಾಗಿದ್ದರು. ದೃದೃಷ್ಟಿಯ ದೊಡ್ಡ ಗುಣ ಇಟ್ಟುಕೊಂಡವರು ಬಂಟರು. ಸಣ್ಣತನದ ಬುದ್ದಿಯನ್ನು ತೋರಿಸಿದವರಲ್ಲ. ಮುಂಬೈ ಯಂತಹ ನಗರಕಕೆ ಹೋಗಿ ಕಷ್ಟದ ಬದುಕು ಸಾಗಿಇಸ ಇಂದು ಹೆಮ್ಮರವಾಗಿ ಬೆಳೆದಿದ್ದಾರೆ. ಎಷ್ಟೇ ಬೆಳೆದರೂ ತಮ್ಮ ನಾಡನ್ನು ಮರೆತವರಲ್ಲ, ಸಾಹಿತ್ಯ ನಾಡು ನುಡಿಗಳಿಗೂ ಪ್ರೋತ್ಸಾಹ ನೀಡಿದವರು, ಇಂತಹ ಭವನ ಕೇವಲ ಒಂದು ಜಾತಿ ಗುಂಪಿಗೆ ಸೀಮಿತವಾಗಿರುವುದಿಲ್ಲ ಸರ್ವರು ಅದರ ಪ್ರಯೋಜನ ನೀಡಬೇಕು ಎಂದರು. ತೂಲುನಾಡಿನ ಸಸ್ಕøತಿ ಯ್ನು ಉಳಿಸುವ ಅವಕಾಶವನನು ಯುವಕರಿಗೆ ಒದಗಿಸಿಕೊಡಿ. ಸಾಂಸ್ಕøತಿಕವಾಗಿ ತುಳುನಾಡು ಪ್ರತ್ಯೇಕತೆಯನ್ನು ಹೊಂದಿದೆ. ಎಂದರು ಮಂಜುನಾಥ ಸ್ವಾಮೀಯ ಭಾವಚಿತ್ರ ಹಾಘೂ ಎರಡು ದೀಪಗಳನ್ನು ಸಭಾಭವನಕಕ್ಕೆ ಕೊಡುಗೆಯಾಗಿ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಸಂಸದ ನಳಿನ್ ಕುಮಾರ್ ಕಟೀಲ್ , ಸಚಿವ ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರಜೈನ್, ಐವನ್ ಡಿ.ಸೋಜ, ಮೊಯ್ದೀನ್ ಬಾವಾ, ಶಾಸಕಿ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೋ, ಮುಂಭೈ ಸಂಸದ ಗೋಪಾಲ ಶೆಟ್ಟಿ , , ಕೆನರಾ ಬ್ಯಾಂಕ್ ಕಾರ್ಐನಿರ್ವಾಹಕ ನಿರ್ದೇಶಕ ಹರ್ದೀಶ್ ಕುಮಾರ್ ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಡಾ.ಪಿ.ವಿ.ಶೆಟ್ಟಿ, ವೇದಿಕೆಯಲ್ಲಿ ಉದ್ಯಮಿಗಳಾದ ಬಿ.ಆರ್.ಶೆಟ್ಟಿ, ಪಿ.ವಿ.ಶೆಟ್ಟಿ ಬೆಳ್ಳೂರು ಪರಾರಿ, ಶಶಿಕಿರಣ್ ಶೆಟ್ಟಿ ಮುಂಬಯಿ, ಡಾ.ಆರ್.ಎನ್ ಶೆಟ್ಟಿ ಹುಬ್ಬಳ್ಳಿ, ಪ್ರಕಾಶ್ ಶೆಟ್ಟಿ, ಸುಧೀರ್ ಶೆಟ್ಟಿ,ಡಾ.ಎ.ಜೆ.ಶೆಟ್ಟಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ.ಎಂ.ಮೋಹನ್ ಆಳ್ವ, ಎ.ಸದಾನಂದ ಶೆಟ್ಟಿ, ಪದ್ಮನಾಭ ಪಯ್ಯಡೆ, ಜಲಂಧರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ರಾಜೇಶ್ ಎಸ್.ಚೌಟ, ಕುಸುಮಾಧರ ಡಿ.ಶೆಟ್ಟಿ, ಸರಸ್ವತಿ ಜಿ.ರೈ, ಕೆ.ಪಿ.ಶೆಟ್ಟಿ ಮೊಡಂಕಾಪುಗೊತ್ತು, ಡಾ.ನಂದ ಕಿಶೋರ್ ಆಳ್ವ ಮಿತ್ತಳಿಕೆ, ರವಿಶೆಟ್ಟಿ ಮೂಡಂಬೈಲು, ವಿಶ್ವನಾಥ ಪಿ.ಶೆಟ್ಟಿ, ತಿಮ್ಮಪ್ಪ ನಾೈಕ್, ಸುಜೀರುಗುತ್ತು ಐತಪ್ಪ ಆಳ್ವ,, ಎಂ.ಸಿ.ಆರ್. ಶೆಟ್ಟಿ, ,ಪ್ಸನ್ನ ಶೆಟ್ಟಿ , ಕೃಷ್ಣಪ್ರಸಾದ್ ಅಡ್ಯಂತಾಯ, ಸಂತೋಷ್ ಶೆಟ್ಟಿ, ಸುರೇರ್ಶ ಆಳ್ವ, ಅಜಿತ್ ಚೌಟ, ಜಗನ್ನಾಥ ಚೌಟ, ಸುರೇಶ್ ರೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಸುಧಾಕರ ಪೂಂಜ, ಪದಾಧಿಕಾರಿಗಳಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಸದಾನಂದ ಡಿ. ಶೆಟ್ಟಿ ರಂಗೋಲಿ, ಶಶಿರಾಜ ಶೆಟ್ಟಿ ಕೊಳಂಬೆ ಕಿರಣ್ ಹೆಗ್ಡೆ ಅನಂತಾಡಿ, ಪ್ರಫುಲ್ಲ ಆರ್. ರೈ ವಿಠಲಕೋಡಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಜಗದೀಶ್ ಶೆಟ್ಟಿ ಇರಾಗುತ್ತು, ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಚಂದ್ರಹಾಸ ರೈ ಬಾಲಾಜಿಬೈಲು, ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮೊದಲಾದವರು ಉಪಸ್ಥಿತರಿದ್ದರು.

ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿದರು. ಡಾ. ಪ್ರಶಾಂತ ಮಾರ್ಲ ವಂದಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ, ಡಾ. ವಿಜೇತಾ ಶೆಟ್ಟಿ, ದೇವದಾಸ ಶಟ್ಟಿ ಕಾರ್ಯಕ್ರಮ ನಿರೂಪಿಸಿದರು.

 ಚಿತ್ರ : ಕಿಶೋರ್ ಪೆರಾಜೆ.

By suddi9

Leave a Reply

Your email address will not be published. Required fields are marked *