ಬಜ್ಪೆ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಜ್ಪೆ ಠಾಣೆಗೆ ದೂರು ಹೋಗಿದೆ. ಬಜ್ಪೆ ಕರಂಬಾರು ನಿವಾಸಿ ಚಂದ್ರಶೇಖರ(47) ಎಂಬಾತನೇ ಅತ್ಯಾಚಾರ ಆರೋಪಿ.

ಪ್ರಕರಣದ ವಿವರ: ಚಂದ್ರಶೇಖರನ ಮೊದಲ ಹೆಂಡತಿ ಕೆಲವು ವರ್ಷಗಳ ಮುಂಚೆ ತೀರಿ ಹೋಗಿದ್ದರು. ಈ ವೇಳೆ ಆತನ ಮೊದಲ ಹೆಂಡತಿಗೆ 17 ವರ್ಷದ ಹೆಣ್ಣುಮಗಳಿದ್ದಳು. ಇದಾದ ಕೆಲವು ದಿನಗಳ ನಂತರ ಆರೋಪಿ ತನ್ನ ಹೆಂಡತಿಯ ತಂಗಿಯ ಜೊತೆ ವಾಸವಾಗಿದ್ದು ಮೂರು ಮಂದಿಯೂ ಒಟ್ಟಾಗಿ ಜೀವಿಸುತ್ತಿದ್ದರು.
ಆರೋಪಿ ಕುಡಿತದ ಚಟ ಹೊಂದಿದ್ದು, ತನ್ನ ಮಗಳ ಮೇಲೆ ಸತತ ಹಲವಾರು ತಿಂಗಳಿನಿಂದ ಅತ್ಯಾಚಾರ ನಡೆಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಕುಡಿದು ಚಿತ್ತಾಗಿ ಬರುತ್ತಿದ್ದ ಈತ ತನ್ನ ಮಗಳಿಗೆ ಅತ್ಯಾಚಾರ ನಡೆಸಿದ ಬಗೆಗೆ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಚೈಲ್ಡ್ಲೈನ್ಗೆ ದೂರು ಸಲ್ಲಿಸಿದ್ದರು.
ಇದರಂತೆ ಚೈಲ್ಡ್ಲೈನ್ ಅಧಿಕಾರಿಗಳು ಆರೋಪಿಯ ಮನೆಗೆ ದಾಳಿ ನಡೆಸಿ ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನೊಂದ ಮಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
