ಸುದ್ದಿ9 ಕೈಕಂಬ:ಗುರುಪುರದಲ್ಲಿ ಹಂಪ್ಸ್ ಹಾಕಿದರೂ ಮೇಲಿಂದ ಮೇಲೆ ಅಪಘಾತ ನಡೆಯುತ್ತಲೇ ಇದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಗುರುಪುರದಲ್ಲಿ ಹಾಕಿರುವ ಅವೈಜ್ಞಾನಿಕ ಹಂಪ್ಸ್ನಿಂದ ಅಪಘಾತ ಸಂಭವಿಸಿದ್ದು ಭಾರೀ ದುರಂತವೊಂದು ತಪ್ಪಿಹೋಗಿದೆ.
ಕಳೆದ ಗುರುವಾರ ಸಂಜೆಯ ವೇಳೆಗೆ ಪೊಳಲಿ ದ್ವಾರದ ಸಮೀಪ ಹಾಕಿರುವ ಹಂಪ್ಸ್ ಸಮೀಪ ಇಂಡಿಕಾ ಕಾರ್ಗೆ ಹಿಂದಿನಿಂದ ಬಂದ ಬೈಕ್ ಗುದ್ದಿ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಈ ಹಂಪ್ಸ್ಗೆ ಎದ್ದು ಕಾಣುವಂತೆ ಝೀಪ್ರಾ ಪಟ್ಟಿ ಹಾಕದಿರುವುದರಿಂದ ಈ ರೀತಿ ದುರಂತ ನಡೆಯುತ್ತಿದೆ ಎಂದು ಅಪಘಾತಕ್ಕೆ ಕಾರಣವಾದ ಚಾಲಕರ ಅಭಿಪ್ರಾಯವಾಗಿದೆ.
ಶುಕ್ರವಾರ ಗುರುಪುರದಲ್ಲಿ ಅಪಘಾತ ನಡೆದಿದ್ದು ಭಾರೀ ದುರಂತವೊಂದು ತಪ್ಪಿಹೋಗಿದೆ. ಗುರುಪುರದ ವ್ಯವಾಸಾಯ ಸೇವಾ ಸಹಕಾರಿ ಸಮೀಪ ಶಾಲಾ ಬಸ್ಗೆ ಹಿಂದಿನಿಂದ ಬಂದ ಕಸ ಸಾಗಿಸುವ ಲಾರಿ ಗುದ್ದಿದ ಪರಿಣಾಮ ಎದುರಿನಿಂದ ಸಾಗುತ್ತಿದ್ದ ಶಾಲಾಬಸ್ ನಜ್ಜುಗುಜ್ಜಾಗಿದೆ. ಶಾಲಾಬಸ್ ವಿದ್ಯಾಜ್ಯೋತಿ ಆಂಗ್ಲಮಾಧ್ಯಮ ಶಾಲೆಗೆ ಸೇರಿದ ಬಸ್ ಎಂದು ತಿಳಿದು ಬಂದಿದೆ. ಆದರೆ ಅಪಘಾತದಿಂದ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇವೆರಡೂ ವಾಹನಗಳು ಗುರುಪುರ ಮೂಲಕ ಮಂಗಳೂರು ಕಡೆಗೆ ಸಾಗುತ್ತಿತ್ತು. ಗುರುಪುರದಲ್ಲಿ ಶುಕ್ರವಾರ ಸ್ಥಳಿಯ ಸಂಘಟನೆಯವರು ಸೇರಿ ಹಂಪ್ಸ್ಗಳಿಗೆ ಪೈಂಟ್ ಬಳಿಯುತ್ತಿದ್ದು ಕಂಡು ಬಂತು ಆದರು ಅಪಘಾತ ಸಂಭವಿಸುತ್ತಲೇ ಇವೆ
ಗುರುಪುರದಲ್ಲಿ ಕಳೆದ ತಿಂಗಳು ಈಚರ್ ಲಾರಿಗೆ ಶಾಲಾ ಬಾಲಕ ರೋಹಿತ್ ಎಂಬಾತ ಸಿಲುಕಿ ದಾರುಣ ಅಂತ್ಯ ಕಂಡಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಜನರು ರಸ್ತೆ ಅಗಲೀಕರಣಕ್ಕೆ ಪಟ್ಟು ಹಿಡಿದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ರಸ್ತೆ ಅಗಲೀಕರಣಗೊಳಿಸದಿದ್ದರೂ ಇದರಂತೆ ತಹಶೀಲ್ದಾರ್ ಆದೇಶದಂತೆ ಅಲ್ಲಲ್ಲಿ ಹಂಪ್ಸ್ ಅಳವಡಿಸಲಾಗಿತ್ತು. ದುರಂತವೆಂದರೆ ಗುರುಪುರದಲ್ಲಿ ಹಂಪ್ಸ್ ಇದೆ ಎಂದು ಗೊತ್ತಾಗಲು ಅಲ್ಲಿ ಸೂಚನಾ ಪಟ್ಟಿಯನ್ನಾಗಲೀ, ಝೀಬ್ರಾ ಪಟ್ಟಿಯನ್ನಾಗಲಿ ಅಳವಡಿಸಿರಲಿಲ್ಲ. ಇದರಿಂದ ವಾಹನ ಚಾಲಕರಿಗೆ ಗೊಂದಲ ಉಂಟಾಗಿ ಮೇಲಿಂದ ಮೇಲೆ ಅಪಘಾತ ಸಂಭವಿಸುತ್ತಲೇ ಇದೆ.

11
ಅಲ್ಲದೆ ಪೊಳಲಿ ದ್ವಾರದ ಸಮೀಪ ಹಾಕಿರುವ ಹಂಪ್ಸ್ ಕೂಡಾ ಅವೈಜ್ಞಾನಿಕತೆಯಿಂದ ಕೂಡಿದ್ದು, ರೋಸಾಮಿಸ್ತಿಕಾ ಶಾಲೆಯ ಗೇಟಿನ ಪಕ್ಕ ಹಂಪ್ಸ್ ಹಾಕಿದ್ದರೆ ಶಾಲಾ ಮಕ್ಕಳಿಗೆ ರಸ್ತೆ ದಾಟಲು ಅನಕೂಲವಗುತ್ತಿತ್ತು ಅದುಬಿಟ್ಟು ರೋಸಾಮಿಸ್ತಿಕಾದಿಂದ ಸ್ವಲ್ಪ ಮುಂದಕ್ಕೆ ಹಾಕಿದ ಹಂಪ್ಸ್ ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ಇಲ್ಲಿ ವಾಹನಗಳಿಗೆ ಬ್ರೇಕ್ ಹಾಕಲು ಸಾಧ್ಯವಿಲ್ಲದಿರುವುದರಿಂದ ಬಸ್ ಚಾಲಕರು ರೋಸಾಮಿಸ್ತಿಕ ಶಾಲಾ ಗೇಟಿನ ಎದುರು ನಿಲ್ಲಿಸದೆ ಬಸ್ಸು ತಂಗುದಾಣದಲ್ಲೆ ನಿಲ್ಲಿಸಿದರೆ ಅಪಘಾತ ಆಗುವುದನ್ನು ತಪ್ಪಿಸಬಹುದು ಬೇರೆ ವಾಹನಗಳಿಗೆ ಸಾಗಲು ಅನುಕೂಲವಾಗುತ್ತದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

By suddi9

Leave a Reply

Your email address will not be published. Required fields are marked *