ಕೈಕಂಬ: ಗಂಜಿಮಠ ಶ್ರೀ ವಿಜಯ ವಾಹಿನಿ ಗಂಜಿಮಠ ಇದರ ಆಶ್ರಯದಲ್ಲಿ ದಾನಿಗಳ ನೆರವಿನಿಂದ 10ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಜೂನ್ 29ರಂದು ಭಾನುವಾರ ನಡೆಯಲಿದೆ.

ಗಂಜಿಮಠ ಪಂಚಯತ್ ವ್ಯಾಪ್ತಿಯ ಮೊಗರು, ತೆಂಕವುಳಿಪಾಡಿ, ಬಡಗವುಳಿಪಾಡಿ ಗ್ರಾಮದ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಆರ್ಥಿಕ ವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಮೊಗರು ಹಿರಿಯ ಪ್ರಾಥಮಿಕಶಾಲೆಯ 1ರಿಂದ 7ನೇ ತರಗತಿ ವರೆಗೆ ಮೊಗರು ಕುಕ್ಕಟ್ಟೆ ವಿಧ್ಯಾಭಾರತಿ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಎ.ಕೆ .ಯು. ಪದವಿ ಪೂರ್ವ ಕಾಲೇಜುನಲ್ಲಿ ಅಧ್ಯಾಪಕರಾಗಿ ಹಾಗೂ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತರಾದ ಎನ್ ಎಸ್ ಮಾಧವ ಮಯ್ಯ ಹಾಗೂ ಸರಕಾರಿ ಹಿ.ಪ್ರಾ.ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತರಾದ ಅಣ್ಣಯ್ಯ ಎಂ. ಹಾಗೂ ಜಿ.ಸುಬ್ರಾಯ ಭಟ್ ಇವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ವಿಜಯವಾಹಿನಿಯ ಅಧ್ಯಕ್ಷ ಜಿ.ಸುನಿಲ್ ಅವರು ಹೇಳಿದರು.

ಇದರ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಶಾಸಕ ಬಿ.ಎ ಮೊ ದಿನ್ ಬಾವ ವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಉದ್ಯಮಿ ಉಳಿಪಾಡಿಗುತ್ತು ರಾಜೇಶ್ ನಾ ಕ್ ನೆರವೇರಿಸಲಿದ್ದಾರೆ . ಉದ್ಯಮಿ ಕರುಣಾಕರ ಶೆಟ್ಟಿ, ಉಧ್ಯಮಿ ಮುಂಬೈ ಮೋನಪ್ಪ ಕರ್ಕೇರಾ ಪದ್ರೆಂಗಿ, ಮಾಜಿ ಜಿಲ್ಲಾ ಪಂ .ಸದಸ್ಯ ಕೃಷ್ಣ ಅಮೀನ್ ಪುಸ್ತಕ ವಿತರಣೆಯನ್ನು ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲೀಕ್ ಕಾಮತ್, ತಾಲೂಕು ಪಂಚಾಯತ್ ಸದಸ್ಯೆ ವಿಜಯಲಕ್ಷ್ಮೀ ಶೆಟ್ಟಿ ,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪವಿತ್ರ ಸುನೀಲ್, ಮಾಜಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್, ನಿವೃತ ಆರೋಗ್ಯಧಿಕಾರಿ ಕ್ರಷ್ಣ ರಾವ್ ಗಂಜಿಮಠ , ಮಾಜಿ ಮಂಡಲ ಪಂಚಾಯತ್ ಸದಸ್ಯೆ ಸುಧಾಕರ ಕುಲಾಲ್, ಪ್ರಗತಿಪರ ಕ್ರಷಿಕ ಮೋಹನ್ ದಾಸ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಆರ್ ಎಸ್ ಝಾಕೀರ್ , ಜಯ ಕುಲಾಲ್ ಮತ್ತು ಸಮಾರಂಭಕ್ಕೆ

ವಿಶೇಷ ಆಹ್ವಾನಿತರಾಗಿ ಲೋಕಯ್ಯ ಕೊಟ್ಟಾರಿ, ಪದ್ಮಿನಿ ಭಾಸ್ಕರ ಭಟ್, ರಾಜು ಶೆಟ್ಟಿ, ವಸಂತ ಭಂಡಾರಿ, ಬಾಬು ಸಾಮಾನಿ,ಮನೀಶ್ ಡಿ.ಶೆಟ್ಟಿ, ಮುಖ್ಯ ಶಿಕ್ಷಕರಾದ ಓಸ್ವಲ್ಡ್ ರೋಡ್ರಿಗಸ್ ಮತ್ತು ಗಂಗಮ್ಮ ಸನ್ಮಾನಿತರಿಗೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಎಂದು ವಿಜಯ ವಾಹಿನಿಯ ಪತ್ರಿಕ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *