ಅವನು ಸುಮಾರು ಏಳು ವರ್ಷದ ಹುಡುಗ ಹೆಸರಿಲ್ಲ, ಕುಲ ಗೋತ್ರ ತಿಳಿದಿಲ್ಲ. ಅಪ್ಪ ಅಮ್ಮ ಯಾರೆಂದೇ ಗೊತ್ತಿಲ್ಲದ ಅನಾಥ ಹುಡುಗ. ಹುಟ್ಟುತ್ತಲೇ ಪ್ರೀತಿಯಿಂದ ವಂಚಿತನಾದ ಆ ಪುಟ್ಟ ಹುಡುಗನಿಗೆ ಬೆಳೆಯುತ್ತಾ ಸಿಕ್ಕಿದ್ದು, ಜನರ ಚುಚ್ಚು ಮಾತು, ಅನಾಥ ಎಂಬ ಬಿರುದು. ಮರುಭೂಮಿಯಂತೆ ಆಗಿದ್ದ ಹುಡುಗನ ಬಾಳಲ್ಲಿ ಬಂದವಳು ಆ ಮುಗ್ಧ ಹುಡುಗಿ.

bs-2

ಇವನು ತನ್ನ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದರೆ, ಅವಳು ತನ್ನ ಪ್ರೀತಿಯ ಅಣ್ಣನನ್ನು ಅಪಘಾತದಲ್ಲಿ ಕಳೆದುಕೊಂಡಳು. ಅಪ್ಪ- ಅಮ್ಮ, ಮನೆ ಸಿರಿವಂತಿಕೆ, ಪ್ರೀತಿ ಇವೆಲ್ಲಾ ಅವಳಿಗಿದ್ದರೂ ತನ್ನ ಅಣ್ಣನಿಲ್ಲ ಎಂಬ ಕೊರಗು ಅವಳಿಗಿತ್ತು. ಅವಳು ಅದೆಲ್ಲೋ ಅವನನ್ನು ನೋಡಿದಳು ತನ್ನ ಅಣ್ಣನ ವಯಸ್ಸಿನವನಾದ ಅವನನ್ನು ಮನೆಗೆ ಕರೆತರಲು ಕೇಳಿದಳು. ಅವಳ ಆಸೆಗಾಗಿ ಅವಳ ಅಪ್ಪ ಅಮ್ಮ ಅವನನ್ನು ಮನೆಗೆ ಕರೆತಂದು ಪ್ರೀತಿ ತೋರಿ, ತಮ್ಮ ಮಗಳಿಗಾಗಿ ಉಳಿಸಿಕೊಂಡರು.

ಯಾರೂ ಇಲ್ಲದ ಅವನಿಗೆ ಈಗ ಎಲ್ಲರೂ ದೊರೆತರು. ಅವಳು ಅವನಲ್ಲಿ ತನ್ನ ಅಣ್ಣನನ್ನು ಕಂಡರೆ, ಇವನು ಅವಳಲ್ಲಿ ತನ್ನ ತಾಯಿಯನ್ನು ಕಂಡನು.

 -ಹರ್ಷಿತಾ

By suddi9

Leave a Reply

Your email address will not be published. Required fields are marked *